ಕಾಸರಗೋಡು ಹೊಸ ನಿಲ್ದಾಣದಲ್ಲಿ ಯುವಕರ ಮಧ್ಯೆ ಘರ್ಷಣೆ: 13 ಮಂದಿ ವಿರುದ್ಧ ಕೇಸು

ಕಾಸರಗೋಡು: ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಯುವಕರು ಗುಂಪುಸೇರಿ ಘರ್ಷಣೆಯಲ್ಲಿ ತೊಡಗಿದ ಘಟನೆ ನಡೆದಿದೆ. ಮಾಹಿತಿ ತಿಳಿದು ತಲುಪಿದ ಟೌನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ. ನಳಿನಾಕ್ಷನ್‌ರ ನೇತೃತ್ವದಲ್ಲಿ ಪೊಲೀಸ್ ತಂಡ ಮೂರು ಮಂದಿಯನ್ನು ಕಸ್ಟಡಿಗೆ ತೆಗೆದಿದೆ. ಬೋವಿಕಾನ, ಕೋಟೂರು, ಪಾತನಡ್ಕ ಹೌಸ್‌ನ ಕೆ. ಅನಿಲ್ ಕುಮಾರ್ (38), ಆದೂರು ಕುಂಟಾರು ಮಿಂಚಿಪದವು ಹೌಸ್‌ನ ಎಂ. ನಿದಿನ್‌ರಾಜ್ (24), ಪಾತನಡ್ಕ ಹೌಸ್‌ನ ಲಿನೀಶ್ ಕುಮಾರ್ (41) ಎಂಬಿವರನ್ನು ಕಸ್ಟಡಿಗೆ ತೆಗೆದು ನೋಟೀಸು ನೀಡಿದ ಬಳಿಕ ಬಿಡುಗಡೆ ಗೊಳಿಸಲಾಗಿದೆ.  ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ನಡೆಸಿದ ಇವರ ವಿರುದ್ಧ ಹಾಗೂ ಗುರುತು ಪತ್ತೆಹಚ್ಚಬಹುದಾದ ಇತರ 10 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಸಂಜೆ 5.30ರ ವೇಳೆ ಘರ್ಷಣೆ ನಡೆದಿದೆ.

RELATED NEWS

You cannot copy contents of this page