ವಾಟ್ಸಪ್ ಮೂಲಕ ಯುವತಿಗೆ ಕಿರುಕುಳ : ಕುಂಜತ್ತೂರು ನಿವಾಸಿ ವಿರುದ್ಧ ಕೇಸು

ಮಂಜೇಶ್ವರ: ವಾಟ್ಸಾಪ್ ಮೂಲಕ ವಿವಾಹಿತ ಯುವತಿಗೆ ಕಿರುಕುಳ ನೀಡಿ  ಆಕೆಯನ್ನು  ಅವಮಾನಗೈಯ್ಯಲೆತ್ನಿಸಿರುವುದಾಗಿ ನೀಡಿದ ದೂರಿನಂತೆ  ಯುವಕ ನೋರ್ವನ ವಿರುದ್ಧ ಕಾಸರಗೋಡು ಸೈಬರ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವರ್ಕಾಡಿ ಪಾವೂರು ನಿವಾಸಿಯಾದ 31ರ ಹರೆಯದ ಯುವತಿ ದೂರು ನೀಡಿದ್ದಾಳೆ.  ಕುಂಜತ್ತೂರು ನಿವಾಸಿ ಇಬ್ರಾಹಿಂ ಖಲೀಲ್  ಎಂಬಾತ     ಮೇ 29ರಿಂದ ಜೂನ್ 30ರ ವರೆಗಿನ ಕಾಲಾವಧಿಯಲ್ಲಿ ಅವಮಾನಗೈಯ್ಯುವ ರೀತಿಯಲ್ಲಿ ವಾಟ್ಸಪ್‌ನಲ್ಲಿ ಪ್ರಚಾರಗೈದಿರುವುದಾಗಿ   ಯುವತಿ ಆರೋಪಿಸಿದ್ದಾಳೆ. ಸೈಬರ್ ಸೆಲ್ ಎಸ್‌ಐ ಎಂ. ಸವ್ಯಸಾಚಿ ಯುವತಿಯ ಹೇಳಿಕೆ ದಾಖಲಿಸಿ ಕೊಂಡ ಬಳಿಕ ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

You cannot copy contents of this page