ನೀಟ್ ಪರೀಕ್ಷೆ ಅವ್ಯವಹಾರ: ಉಪವಾಸ ಸತ್ಯಾಗ್ರಹ ನಿರತ ವಾಂಗ್ಚುಕ್ ಆಸ್ಪತ್ರೆಗೆ; ಪ್ರತಿಭಟನೆಗಾರರನ್ನು ತೆರವುಗೊಳಿಸಲೆತ್ನಿಸಿದ ಪೊಲೀಸರು

ನವದೆಹಲಿ: ನೀಟ್ ಪರೀಕ್ಷೆ ಯಲ್ಲಿ ನಡೆದ ಅವ್ಯವಹಾರದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂಬ ಬೇಡಿಕೆ ಮುಂದಿರಿಸಿ ಕಾಕ್ರೋಚ್ ಜನತಾಪಾರ್ಟಿ (ಸಿಜೆಪಿ) ದಿಲ್ಲಿಯ ಜಂತರ್ ಮಂಥರ್‌ನಲ್ಲಿ ನಡೆಸುವ ಚಳವಳಿಗೆ ಬೆಂಬಲ ಸೂಚಿಸಿ ಅಲ್ಲಿ ಕಳೆದ ೨೧ ದಿನಗಳಿಂದ ಅನಿರ್ಧಿ ಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದ ಲಡಾಕ್‌ನ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ಪೊಲೀಸರು ಪ್ರತಿಭಟನಾ ಸ್ಥಳದಿಂದ ದೆಹಲಿಯ ರಾಮ್‌ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವೈದ್ಯರ ಸಲಹೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಇಂತಹ ಕ್ರಮ ಕೈಗೊಂ ಡಿದ್ದಾರೆ. ಉಪವಾಸ ನಿರತ ಸೋನಂ ರ ಆರೋಗ್ಯ ಸ್ಥಿತಿ ಹದಗೆ ಟ್ಟಿದ್ದು ಹೈಕೋರ್ಟ್‌ನ ಆದೇಶಗಳಿಗೆ ಅನುಸಾರವಾಗಿ ಮತ್ತು ತಜ್ಞರ ವೈದ್ಯಕೀಯ ಸಲಹೆಯಂತೆ  ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಸೋನಂರನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಲೆತ್ನಿಸುವ ವೇಳೆ  ಪ್ರತಿಭಟನಾ ನಿರತರು ಅಡಚಣೆ ಸೃಷ್ಟಿಸಲೆತ್ನಿಸಿದರು. ಇದರಿಂದ ಅಲ್ಲಿ  ಆ ವೇಳೆ ಬಿಗು ವಾತಾವರಣ ಸೃಷ್ಟಿಯಾಯಿತು.  ಅದನ್ನು ಲೆಕ್ಕಿಸದೆ ಪೊಲೀಸರು ತೀವ್ರ ಸಂಯಮ ವಹಿಸಿ ಸೋನಂರನ್ನು ಅಲ್ಲಿಂದ ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಪ್ರತಿಭಟನೆಗಾರರು ಆದಷ್ಟು ಶೀಘ್ರ ಜಂತರ್ ಮಂಥರ್‌ನ್ನು ಶಾಂತಿಯುತವಾಗಿ ತೆರವುಗೊಳಿಸು ವಂತೆ  ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಮಾತ್ರವಲ್ಲಈ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಸೋನಂರನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದ ಬೆನ್ನಲ್ಲೇ ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ನಿರಾಹಾರ ಸತ್ಯಾಗ್ರಹ ಆರಂಭಿಸಿದ್ದಾರೆ.

You cannot copy contents of this page