ಧಾರಾಕಾರ ಮಳೆ: ಗುಡ್ಡೆ ಕುಸಿದು ಬಾವಿ ಮುಚ್ಚುಗಡೆ; ಮನೆಗೆ ಹಾನಿ

ಮಂಜೇಶ್ವರ: ಧಾರಾಕಾರ ಮಳೆಗೆ ಬಂಗ್ರಮಂಜೇಶ್ವರದಲ್ಲಿ ಗುಡ್ಡೆ ಕುಸಿದು ಬಾವಿ ಮುಚ್ಚುಗಡೆಗೊಂ ಡಿದೆ. ಇದೇ ವೇಳೆ ಮಣ್ಣು ಕುಸಿದುಬಿದ್ದು ಮನೆಗೂ  ಹಾನಿ ಸಂಭವಿಸಿದೆ.    ಕನಿಲ ಭಂಡಾರ ನಿಲಯದ ಪುರುಷೋತ್ತಮ ಎಂಬವರ ಮನೆಗೆ ಸಮೀಪದ ಗುಡ್ಡೆ ಕುಸಿದುಬಿದ್ದಿದೆ.  

ನಿನ್ನೆ ಮುಂಜಾನೆ ಗುಡ್ಡೆ ಕುಸಿದುಬಿದ್ದು ಮನೆ ಮುಂಭಾಗದ ಲ್ಲಿರುವ ಬಾವಿ  ಪೂರ್ಣವಾಗಿ ಮುಚ್ಚುಗಡೆಗೊಂಡಿದೆ. ಇಂದು ಮುಂಜಾನೆ ಗುಡ್ಡೆ ಕುಸಿದು ಮನೆಮೇಲೆ ಬಿದ್ದು ಅಡುಗೆಕೋಣೆಗೆ ಹಾನಿ ಸಂಭವಿಸಿದೆ.   ಇದರಿಂದ ಎಂಟು ಮಂದಿಯ ಕುಟುಂಬವನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದ. ಇದೇ ವೇಳೆ ಸಮೀಪದ ಇತರ ಮನೆಗಳೂ ಗುಡ್ಡೆ ಕುಸಿತದಿಂದ ಅಪಾಯ ಭೀತಿ ಎದುರಿಸುತ್ತಿವೆ. ಘಟನೆ ಸ್ಥಳಕ್ಕೆ ಪಂಚಾಯತ್ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿದರು.

You cannot copy contents of this page