ಕಾಸರಗೋಡು: ಪೈಕ ಬಳಿಯ ಬಾಲಡ್ಕದ ಬಿ.ಟಿ. ಜ್ಯೋತಿಷ್ (26) ಬೆಂಗಳೂರಿನಲ್ಲಿ ಕುಸಿದುಬಿದ್ದು ಮೃತ ಪಟ್ಟರು. ಬುಧವಾರ ಬೆಳಿಗ್ಗೆ ಕೆಲಸಕ್ಕೆ ತೆರಳಲು ಸಿದ್ಧತೆಯಲ್ಲಿದ್ದಾಗ ಇವರು ಕುಸಿದುಬಿದ್ದಿದ್ದರು. ಕೂಡಲೇ ಸಹೋ ದ್ಯೋಗಿಗಳು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಕಳೆದ ಐದು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಜ್ಯೋತಿಷ್ ಕೆಲಸ ನಿರ್ವಹಿಸುತ್ತಿದ್ದರು. ತಾಯತ್ತ್ವಳಪ್ಪಿಲ್ ಬಾಲಕೃಷ್ಣನ್-ಮಲ್ಲಿಕಾ ದಂಪತಿಯ ಪುತ್ರನಾದ ಮೃತರು ಸಹೋದರ-ಸಹೋದರಿಯರಾದ ಮನೀಶ, ಕಾವ್ಯ, ದಿವ್ಯ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.






