ಕುಂಬಳೆ: ಕೊಡ್ಯಮ್ಮೆ ನಿವಾಸಿ ಬಾಪುಂಞಿ ಮೈಂಕೂಡಲ್ (61) ನಿಧನಹೊಂದಿದರು. ಇವರು ಮಾಜಿ ಅನಿವಾಸಿಯಾಗಿದ್ದರು. ಅಸೌಖ್ಯ ನಿಮಿತ್ತ ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ ಕೊಡ್ಯಮ್ಮೆಯ ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು.
ಮೃತರು ಪತ್ನಿ ಖದೀಜ, ಮಕ್ಕಳಾದ ಮುನ್ಶಿರ, ಮುಹಾಸ್ (ಸೌದಿ), ಮುಫಸಲ್ (ದುಬೈ), ಅಳಿಯ-ಸೊಸೆಯಂದಿರಾದ ಆರಿಸ್ ಉಳವಾರ್, ಸಹದಿಯ, ರಿಫ, ಸಹೋದರ-ಸಹೋ ದರಿಯರಾದ ಮುಹಮ್ಮದ್ ಕುಂಞಿ (ಸೌದಿ), ಆಸ್ಯುಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮೃತ ಬಾಪುಂಞಿ ಅವರು ಕಾರವಲ್ ವರದಿಗಾರ ಅಬ್ದುಲ್ಲ ಕುಂಬಳೆ ಅವರ ಸಹೋದರಿಯ ಪತಿಯಾಗಿದ್ದಾರೆ.






