ಕೇಂದ್ರ ಸರಕಾರದ ಆರ್ಥಿಕ ದಿಗ್ಬಂಧನ ನೀತಿಗೆದುರಾಗಿ ಎಡರಂಗದಿಂದ ಪ್ರತಿಭಟನೆ

ಮಂಜೇಶ್ವರ: ಕೇಂದ್ರ ಸರಕಾರದ ಆರ್ಥಿಕ ದಿಗ್ಬಂಧನ ನೀತಿಗೆದುರಾಗಿ ಮೀಂಜ ಪಂಚಾಯತ್ ಮಟ್ಟದ ಜನಪರ ಪ್ರತಿಭಟನೆ ನಿನ್ನೆ ಮೀಯಪದವಿನಲ್ಲಿ ನಡೆಯಿತು. ಎಲ್‌ಡಿಎಫ್  ನೇತಾರ ಸುರೇಶ್ ಬಾಬು ಉದ್ಘಾಟಿಸಿದರು. ನೇತಾರರಾದ ಅಬ್ದುಲ್ ರಜಾಕ್  ಚಿಪ್ಪಾರ್, ಡಿ. ಕಮಲಾಕ್ಷ, ಜಯರಾಮ ಬಲ್ಲಂಗುಡೇಲ್, ರಾಮಚಂದ್ರ ಟಿ, ಗಂಗಾಧರ ಕೊಡ್ಡೆ, ಸುಂದರಿ ಆರ್ ಶೆಟ್ಟಿ, ಹರೀಶ್ ಕಡಂಬಾರ್, ಲೋಕೇಶ್ ಚಿನಾಲ ಉಪಸ್ಥಿತರಿದ್ದರು. ಪೈವಳಿಕೆ ಪಂಚಾಯತ್ ಸಮಿತಿ ವತಿಯಿಂದ ಪೈವಳಿಕೆ ಪೇಟೆಯಲ್ಲಿ ನಡೆದ ಪ್ರತಿಭಟನೆಯನ್ನು ಸಿಪಿಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ.ವಿ. ಕುಂಞಿರಾಮನ್ ಉದ್ಘಾಟಿಸಿ ದರು. ಅಶೋಕ ಭಂಡಾರಿ ಅಧ್ಯಕ್ಷತೆ ವಹಿಸಿದರು. ಪುರುಷೋತ್ತಮ ಬಳ್ಳೂರು, ಹಾರಿಸ್ ಪೈವಳಿಕೆ, ವಿನಯ್ ಕುಮಾರ್, ಬಶೀರ್ ಬಿ.ಎ, ಪಂ. ಅಧ್ಯಕ್ಷೆ ಜಯಂತಿ ಕೆ, ಶ್ರೀನಿವಾಸ ಭಂಡಾರಿ, ಅಹಮ್ಮದ್ ಹುಸೈನ್, ಚಂದ್ರ ನಾಯ್ಕ, ಅಬ್ದುಲ್ಲ ಕೆ. ಭಾಗವಹಿಸಿದರು

You cannot copy contents of this page