ಬದಿಯಡ್ಕದಲ್ಲಿ ಕಾಂಗ್ರೆಸ್ ನೇತಾರ ರಾಮ ಪಾಟಾಳಿಯವರ ಸಂಸ್ಮರಣೆ

ಬದಿಯಡ್ಕ:  ಬದಿಯಡ್ಕ ಪಂಚಾ ಯತ್‌ನ ಮಾಜಿ ಅಧ್ಯಕ್ಷ, ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರೂ ಆದ ದಿ| ಬಿ. ರಾಮ ಪಾಟಾಳಿಯವರ  ಏಳನೇ ಸಂಸ್ಮರಣಾ ವಾರ್ಷಿಕವನ್ನು  ಇಂಡಿಯನ್ ನೇಶನಲ್ ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿ ನೇತೃತ್ವದಲ್ಲಿ  ಮಂಡಲ ಸಮಿತಿ ಕಚೇರಿ ಸಭಾಂಗಣದಲ್ಲಿ ನಡೆಸಲಾಯಿತು.  ಕಾಂಗ್ರೆಸ್ ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಾರಿಜಾಕ್ಷನ್ ಅವರು ರಾಮ ಪಾಟಾಳಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಬಳಿಕ ನಡೆದ ಸಂಸ್ಮರಣಾ ಕಾರ್ಯಕ್ರಮವನ್ನು  ಕಾಂಗ್ರೆಸ್ ಜಿಲ್ಲಾ  ಕಾರ್ಯದರ್ಶಿ ಮಾಮೂಣಿ ವಿಜಯನ್ ಉದ್ಘಾಟಿಸಿದರು. ಬಾಲಮಂಚ್ ಜಿಲ್ಲಾ ಸಮಿತಿ ಅಧ್ಯಕ್ಷ ಅಭಿಲಾಷ್, ನೇತಾರರಾದ ಚಂದ್ರಹಾಸ ರೈ, ಜಗನ್ನಾಥ ರೈ, ಗಂಗಾಧರ ಗೋಳಿಯಡ್ಕ, ಕುಂಜಾರು ಮೊಹಮ್ಮದ್ ಹಾಜಿ, ಎಂ. ಅಬ್ಬಾಸ್, ಶ್ರೀನಾಥ್ ಬದಿಯಡ್ಕ, ಚಂದ್ರಹಾಸನ್ ಮಾಸ್ತರ್, ಲೀಲಾವತಿ ಕುಂಟಾಲುಮೂಲೆ, ಅಶ್ವತಿ ಅಶೋಕನ್, ಜಯರಾಮ ಕುಂಟಾಲುಮೂಲೆ ಮಾತನಾಡಿದರು. ರವೀಂದ್ರ ಕುಂಟಾಲುಮೂಲೆ, ವಾಮನ ನಾಯ್ಕ್, ರಾಮಕೃಷ್ಣ, ಸಿರಿಲ್ ಡಿ’ಸೋಜ, ಅನಸೂಯ, ರಜನಿ, ಖಮರುದ್ದೀನ್ ಬಣ್ಪುತ್ತಡ್ಕ, ಸತೀಶ್ ಪೆರುಮುಂಡ, ರಾಮ ಗೋಳಿಯಡ್ಕ ಮೊದಲಾದವರು ಉಪಸ್ಥಿತರಿದ್ದರು. ಕೇಶವ ಪಾಟಾಳಿ ಸ್ವಾಗತಿಸಿ, ರಾಮ ಪಟ್ಟಾಜೆ ವಂದಿಸಿದರು.

You cannot copy contents of this page