ಪತ್ನಿಯ ನಿಧನದ 10ನೇ ದಿನ ಪತಿಯೂ ನಿಧನ

ಕಾಸರಗೋಡು: ಪತ್ನಿ ಮೃತಪಟ್ಟ 10ನೇ ದಿನ ಪತಿ ಕೂಡಾ ನಿಧನ ಹೊಂದಿದರು. ಪಾಕಂ ಕಣ್ಣಂವಯಲ್ ಕಿಳಕ್ಕೇವೀಟಿಲ್ ಅಡುಕ್ಕಾಡುಕ್ಕಂ ತರವಾಡು ಕಾರ್ನವರ್ ಕೆ. ಕೃಷ್ಣನ್ ನಾಯರ್ (86) ನಿಧನ ಹೊಂದಿದರು. ಇವರ ಪತ್ನಿ ಮುಂಙತ್ ಕಾರ್ತ್ಯಾಯಿನಿ ಅಮ್ಮ ಕಳೆದ ತಿಂಗಳ 23ರಂದು ನಿಧನ ಹೊಂದಿದ್ದರು.

ಮೃತರು ಮಕ್ಕಳಾದ ಎಂ. ತಂಬಾನ್ ನಾಯರ್, ಸೀತಾ ಕುಮಾರಿ, ಉಷಾ, ಚಂದ್ರನ್, ವಿನೋದ್, ಅಳಿಯಂದಿರಾದ ಕುಂಞಿಕಣ್ಣನ್, ಗೋಪಿನಾಥನ್, ಸೊಸೆಯಂದಿರಾದ ಎಂ. ಸೀನ, ಎ. ಅರ್ಚನ, ಸಹೋದರಿ ನಾರಾಯಣಿಅಮ್ಮ, ಸಹೋದರರಾದ ನಾರಾಯಣನ್ ನಾಯರ್, ಕುಮಾರನ್ ನಾಯರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page