ಉಪ್ಪಳ: ಉಪ್ಪಳ ಶಿವಾಜಿನಗರದಲ್ಲಿ ಕಡಲ್ಕೊರೆತದಿಂದ ಮನೆ ಸಮುದ್ರ ಪಾಲಾದ ಬೆನ್ನಲ್ಲೇ ಮಂಗಲ್ಪಾಡಿ ಪಂಚಾ ಯತ್‌ನ 16ನೇ ವಾರ್ಡ್ ಮುಟ್ಟಂ ಬೇರಿಕೆಯಲ್ಲಿ ರಸ್ತೆ ಸಮುದ್ರಪಾಲಾಗು ತ್ತಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾ ಗಿದೆ. ಈ ರಸ್ತೆ ಸಂಪೂರ್ಣ ನೀರುಪಾಲಾ ದರೆ ಈ ಪ್ರದೇಶದ ನೆಬಿನ್, ಇಬ್ರಾಹಿಂ, ಅನಿಲ್, ಆನಂದ ಎಂಬವರ ಮನೆಗೂ ಅಪಾಯವುಂಟಾಗಲಿದೆ. ಕಳೆದೆರಡು ದಿನಗಳಿಂದ ಈ ಪರಿಸರದಲ್ಲಿ ಕಡಲ್ಕೊ ರೆತ ಹೆಚ್ಚಾಗಿದೆ. ಶಾರದಾನಗರದಲ್ಲಿ ಶಶಿಕಲರ ಮನೆ ನೀರುಪಾಲಾಗಿದ್ದು, ಇಲ್ಲಿನ ಲಲಿತ, ನಿವೇದಿತ, ಗಿರಿಜ ಎಂ ಬವರ ಮನೆಗಳು ಅಪಾಯದಂಚಿನಲ್ಲಿದೆ. ಇವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ನಾಶನಷ್ಟಗೊಂಡ ಕುಟುಂಬಗಳಿಗೆ ಪರಿಹಾರ ಕ್ರಮ ಕೂಡಲೇ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.







