ಕಾಸರಗೋಡು: ಕಡಲ್ಕೊರೆತದಿಂದ ತೀವ್ರ ಸಂದಿಗ್ಧತೆಯಲ್ಲಿರುವ ಕುಂಬಳೆ ಕೊಪಾಡಿ ಕಡಪ್ಪುರಂ, ಉಪ್ಪಳ ಶಾರದಾ ನಗರ ಕಡಪ್ಪುರಂಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸ್ಥಳೀ ಯರೊಂದಿಗೆ ಮಾತನಾಡಿದ ಜಿಲ್ಲಾಧಿ ಕಾರಿ, ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು. ಕೊಪಾಡಿ ಕಡಪ್ಪುರದಲ್ಲಿ ೩ ಕುಟುಂ ಬಗಳನ್ನು ಈ ಮೊದಲೇ ಸ್ಥಳಾಂತರಿ ಸಲಾಗಿದೆ. ಪುನರ್ಗೇಹಂ ಯೋಜನೆ ಪ್ರಕಾರ ಸ್ಥಳೀಯ ನಿವಾಸಿಗಳಿಗೆ ಪುನರ್ವಸತಿ ಕ್ರಮಗಳನ್ನು ಶೀಘ್ರವೇ ನಡೆಸಲಾಗುವುದೆಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದರು.
ಕಡಲ್ಕೊರೆತದ ಹಿನ್ನೆಲೆಯಲ್ಲಿ ಇಲ್ಲಿಂದ ಸ್ಥಳಾಂತರಗೊಳ್ಳಲು ಒಪ್ಪದಿದ್ದ ಕುಟುಂಬಗಳು ಕೂಡಾ ಸುರಕ್ಷಿತವಾಗಿ ಸಂಬಂಧಿಕರ ಮನೆಗೆ ಸ್ಥಳಾಂತರಗೊಳ್ಳುವು ದಾಗಿ ಜಿಲ್ಲಾಧಿಕಾರಿಯವರಲ್ಲಿ ತಿಳಿಸಿ ದ್ದಾರೆ. ಕಡಲ್ಕೊರೆತವನ್ನು ಎದುರಿಸಲು ಚೆಲ್ಲಾನಂ ಮಾದರಿಯಲ್ಲಿ ಟೆಟ್ರಾಪೋಡ್ ಗಳನ್ನು ಜ್ಯಾರಿಗೊಳಿಸಬೇಕೆಂದು ಸ್ಥಳೀಯರು ಜಿಲ್ಲಾಧಿಕಾರಿಯಲ್ಲಿ ಆಗ್ರಹಿಸಿದ್ದಾರೆ. ತೆಂಗುಗಳು ಸಹಿತ ನಾಶನಷ್ಟ ಸಂಭವಿಸಿದ ಲೆಕ್ಕ ನೀಡಲು ಜಿಲ್ಲಾಧಿಕಾರಿ ವಿಲ್ಲೇಜ್ ಅಧಿಕಾರಿಗೆ ತಿಳಿಸಿದರು. ಕುಂಬಳೆ ಪಂ. ಅಧ್ಯಕ್ಷ ಬಿ.ಪಿ. ಅಬ್ದುಲ್ ಖಾದರ್, ಉಪಾಧ್ಯಕ್ಷ ಎಂ. ಬಲ್ಕೀಸ್, ಸದಸ್ಯರಾದ ಹಮೀದ್ ಕೋಯ, ಅಮಿತ ಆಳ್ವ, ಎ. ಕಾಂಚಾರ, ಬ್ಲೋಕ್ ಪಂ. ಸದಸ್ಯ ಪೃಥ್ವಿರಾಜ್ ಶೆಟ್ಟಿ, ಪಂಚಾಯತ್ ಕಾರ್ಯದರ್ಶಿ ಕೆ. ಸಿದ್ಧಾರ್ಥ, ಅಸಿಸ್ಟೆಂಟ್ ಸೆಕ್ರೆಟರಿ ಶೈಜು, ಎಲ್ಎಸ್ಜಿಡಿ ಇಂಜಿನಿಯರ್ ಸತೀಶ್, ಮಂಜೇಶ್ವರ ತಹಶೀಲ್ದಾರ್ ಎಲ್.ಕೆ. ಸುಬೈರ್, ಡೆಪ್ಯುಟಿ ತಹಶೀಲ್ದಾರ್ ಕಿರಣ್ ಶೆಟ್ಟಿ, ವಿಲ್ಲೇಜ್ ಆಫೀಸರ್ ರಾಜೇಶ್ ಕುಮಾರ್, ಇರಿಗೇಶನ್ ವಿಭಾಗದ ಇಂಜಿನಿಯರ್ ಸಂಜಯ್, ಕುಂಬಳೆ ಪಿಎಚ್ಸಿ ಹೆಲ್ತ್ ಇನ್ಸ್ಪೆಕ್ಟರ್ ಅರುಣ್ ಕುಮಾರ್, ಫಿಶರೀಸ್ ಇಲಾಖೆಯ ಡಿ.ಡಿ ಶೈನಿ, ಅರುಣೇಂದು, ಶಿನಾಸ್, ಸಂಜಯ್ ಮೊದಲಾದವರು ಜಿಲ್ಲಾಧಿಕಾರಿಯವರ ಜೊತೆಗಿದ್ದರು.
ಮಂಗಲ್ಪಾಡಿ ಶಾರದಾನಗರ ಕಡಪ್ಪುರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸ್ಥಳೀಯರೊಂದಿಗೆ ಮಾತನಾಡಿದಾಗ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಬೇಕೆಂದು ಸ್ಥಳೀಯರು ಆಗ್ರಹಿಸಿದರು. ಈ ವೇಳೆ ಕಡಲ್ಕೊರೆತವನ್ನು ಎದುರಿಸಲು ನಕ್ಷತ್ರಕಲ್ಲು ಹಾಕಲಿರುವ ಪ್ರೊಪೋಸಲ್ ನೀಡಲು ಜಿಲ್ಲಾಧಿಕಾರಿ ಇರಿಗೇಶನ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಬಳಿಕ ಹಾನಿಗೊಂಡ ಮನೆಗಳನ್ನು, ಸೊತ್ತುಗಳ ಬಗ್ಗೆ ನಷ್ಟ ಪರಿಹಾರ ಲೆಕ್ಕ ಹಾಕಿ ಎಲ್ಆರ್ಡಿ ಪೋರ್ಟಲ್ಗೆ ಅಪ್ಲೋಡ್ ಮಾಡಲು ತಹಶೀಲ್ದಾರ್ರಿಗೆ ಜಿಲ್ಲಾಧಿಕಾರಿ ಹೊಣೆ ನೀಡಿದರು. ಮಂಗಲ್ಪಾಡಿ ಪಂ. ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್ಮಾನ್, ಉಪಾಧ್ಯಕ್ಷೆ ಶಮೀನಾ, ಅಬ್ದುಲ್ ರಜಾಕ್, ಸುಮಯ್ಯ ರಫೀಕ್, ಸುಹರಾ, ಸಫೀನ, ನಜ್ಮುನ್ನೀಸ, ರಹಿಯಾನ, ಅಶೋಕ್, ಪಂ. ಕಾರ್ಯದರ್ಶಿ ವಿನಯ್ ರಾಜ್, ತಹಶೀಲ್ದಾರ್ಗಳು, ವಿಲ್ಲೇಜ್ ಆಫೀಸರ್ ಸಹಿತ ಹಲವಾರು ಅಧಿಕಾರಿಗಳು ಜಿಲ್ಲಾಧಿಕಾರಿ ಜೊತೆಗಿದ್ದರು.







