ಪ್ರಕೃತಿ ವಿಕೋಪ ವೇಳೆ ಸಹಾಯಹಸ್ತ ನೀಡಲು ಕಾಂಗ್ರೆಸ್ ಕಾರ್ಯಕರ್ತರಿಗೆ ಸೋಮಶೇಖರ ಕರೆ

ಪೈವಳಿಕೆ: ವಿಪರೀತ ಮಳೆಯಿಂ ದಾಗಿ ಪ್ರಾಕೃತಿಕ ವಿಕೋಪಗಳು ಸಂs ವಿಸಿದ್ದು, ಇಂತಹ ಸಂದರ್ಭಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಾಗರೂ ಕತೆಯಿಂದ ಜನರಿಗೆ ಅಗತ್ಯಗಳಿಗೆ ಸ್ಪಂದಿಸಲು ಸಿದ್ಧರಾಗಿರಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಕರೆ ನೀಡಿದ್ದಾರೆ. ಬಾಯಾರಿನ ಯುವಕ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿ  ಬಾಯಾರುಪದವಿನಲ್ಲಿ ಸ್ಥಾಪಿಸಿದ ಪಕ್ಷದ ನೂತನ ಧ್ವಜಸ್ತಂಭದಲ್ಲಿ ಧ್ವಜಾರೋಹಣ ನಡೆಸಿ ಅವರು ಮಾತನಾಡಿದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ಕುಮಾರ್  ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ ರೈ, ಮುಖಂಡರಾದ ನಾರಾಯಣ ಏದಾರ್, ಸಚ್ಚಿದಾನಂದ ರೈ, ಹನೀಫ ಮೇರ್ಕಳ, ಅಬ್ದುಲ್ಲ ಹಾಜಿ, ಗಂಗಾಧರ ನಾಯ್ಕ್, ಸಿಬಿ ಕಯ್ಯಾರ್, ಅಂದುಂಞಿ ಹಾಜಿ, ರಾಣಿ ಟೀಚರ್, ರಾಶಿಕ್ ಪೈವಳಿಕೆ ಉಪಸ್ಥಿತರಿದ್ದರು. ಶಾಜಿ ಸ್ವಾಗತಿಸಿ, ಶಿವರಾಮ ಶೆಟ್ಟಿ ವಂದಿಸಿದರು.

RELATED NEWS

You cannot copy contents of this page