ಹೃದಯಾಘಾತದಿಂದ ಅರ್ಚಕ ನಿಧನ

ಮುಳ್ಳೇರಿಯ: ಎದೆನೋವು ಕಾಣಿಸಿಕೊಂಡು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ  ಅರ್ಚಕ ಹೃದಯಾಘಾತದಿಂದ ನಿಧನಹೊಂದಿದರು.  ಮೂಲತಃ ಅನಂತಪುರ ನಿವಾಸಿಯೂ, ಪ್ರಸ್ತುತ ಕುಂಟಾರು  ಬಳಿಯ ಮಣಿಯೂರಿ ನಲ್ಲಿ ವಾಸಿಸುತ್ತಿದ್ದ ಮುರಳೀಧರ ಪೆರ್ಲಾಯ  (46) ಮೃತಪಟ್ಟ ವ್ಯಕ್ತಿ.  ಇವರಿಗೆ ಮೊನ್ನೆ ಎದೆನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ಇದ ರಿಂದ ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆನಿನ್ನೆ ಹೃದಯಾಘಾತ ವುಂಟಾಗಿ ದೆಯೆಂದು ತಿಳಿದುಬಂದಿದೆ.

 ಮುರಳೀಧರ ಪೆರ್ಲಾಯ  ಅವರು ಕಳೆದ ೨೫ ವರ್ಷಗಳಿಂದ ಕುಂಟಾರು ದೇವಸ್ಥಾನ ಹಾಗೂ ತಾಂತ್ರಿಕ ಸದನದಲ್ಲಿ  ವೈದಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಅನಂತಪುರದ ದಿ| ಕೇಶವ ಪೆರ್ಲಾಯರ ಪುತ್ರನಾದ ಮೃತರು ಪತ್ನಿ ಕುಮಾರಿ, ಪುತ್ರ ಆರ್ಯನ್, ಸಹೋದರ ವೇಣು ಗೋಪಾಲ ಪೆರ್ಲಾಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page