ಕಾಸರಗೋಡು: ಮಾದಕದ್ರವ್ಯ ಮಾರಾಟ ಹಾಗೂ ಇತರ ವಂಚನೆಗಳಿಗಾಗಿ ಬ್ಯಾಂಕ್ ಖಾತೆಗಳನ್ನು ತೆರೆಯಲು ನಕಲಿ ದಾಖಲುಪತ್ರಗಳನ್ನು ತಯಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ಸೇರಿ ಇಬ್ಬರನ್ನು ತಲಶ್ಶೇರಿ ಎಎಸ್ಪಿ ಡಾ. ಎಂ ನಂದಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಕಾಸರಗೋಡು ಮೊಗ್ರಾಲ್ ಕೂಟ್ಟಾಯಂ ವಳಪ್ಪಿಲ್ ಅಬ್ದುಲ್ ರಹ್ಮಾನ್ (36) ಮತ್ತು ಎರ್ನಾಕುಳಂ ಪಳ್ಳುತುರುತ್ತಿಯ ಕೆ.ಎಂ. ರಿಶಾದ್ (41) ಬಂಧಿತ ಆರೋಪಿಗ ಳಾಗಿದ್ದಾರೆ. ಬೆಂಗಳೂರಿನಿಂದ ಈ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ನೂರರಷ್ಟು ಆಧಾರ್ ಕಾರ್ಡ್ಗಳು, ಪಾನ್ಕಾರ್ಡ್ಗಳು, ಹಲವು ನಕಲಿ ಸರ್ಟಿಫಿಕೇಟ್ಗಳು, ಮೊಬೈಲ್ ಸಿಮ್ ಕಾರ್ಡ್ಗಳು, ಮೊಹರುಗಳು ಹಾಗೂ ಬ್ಯಾಂಕ್ ಪಾಸ್ ಪುಸ್ತಕಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದಾರೆ. ಬೆಂಗಳೂರಿನಲ್ಲಿ ಪ್ರಿಂಟಿಂಗ್ ಸಜ್ಜೀಕರಣ ನಡೆಸಿ ಅಲ್ಲಿ ನಕಲಿ ದಾಖಲುಪತ್ರ ಗಳನ್ನು ತಯಾರಿಸಲಾ ಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮಾದಕದ್ರವ್ಯ ದಂಧೆಯವರಿಗೆ ವಾಸಿಸಲು ಕೊಠಡಿ ಸೌಕರ್ಯ, ಪ್ರಯಾಣ ಸೌಕರ್ಯಗಳನ್ನು ಈ ದಂಧೆಗೊಳಪಟ್ಟವರು ಏರ್ಪಡಿಸುತ್ತಿದ್ದಾರೆ. ಮಾತ್ರವಲ್ಲದೆ ಮಾದಕದ್ರವ್ಯ ಸಾಗಾಟಕ್ಕೆ ನಕಲಿ ದಾಖಲುಪತ್ರಗಳನ್ನು ಇವರು ಉಪಯೋಗಿಸುತ್ತಿದ್ದಾರೆ. ತಮ್ಮ ದಂಧೆಗಿರುವ ಅಗತ್ಯದ ಮಾದಕವಸ್ತುಗಳನ್ನು ದಂಧೆಯವರು ದೆಹಲಿಯಿಂದ ಅತೀವ ಗುಪ್ತವಾಗಿ ತರಿಸುತ್ತಾರೆ. ಗುಡ್ಗಾವ್ನ ಕ್ರೈಂ ಬ್ರಾಂಚ್ ವಿಭಾಗ ದಿನಗಳ ಹಿಂದೆ 700 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿ ಕೊಂಡಿತ್ತು. ಅದಕ್ಕೆ ಸಂಬಂಧಿಸಿ ಅರ್ಶಾದ್ ಎಂಬಾತನನ್ನು ಬಂಧಿಸಲಾಗಿತ್ತು. ಆ ಪ್ರಕರಣದಲ್ಲ್ಲೂ ಇದೇ ತಂಡ ನಂಟು ಹೊಂದಿದೆಯೆಂದು ಎಎಸ್ಪಿ ತಿಳಿಸಿದ್ದಾರೆ.
ಎಂಡಿಎಂಎ ಪ್ರಕರಣದ ತಂಡಕ್ಕೆ ಸಂಬಂಧಿಸಿ ತಲಶ್ಶೇರಿ ಚಿರಕ್ಕರ ಪುದಿಯಕುರುಕ್ಕನ್ಕಂಡಿಯ ಮುಜಿತ್ತಾಬ್ (ತಂಬು 28) ಎಂಬಾತನನ್ನು ದಿನಗಳ ಹಿಂದೆ ಬೆಂಗಳೂರಿನಿಂದ ಪೊಲೀಸರು ಬಂಧಿಸಿದ್ದರು. ಆತ ಉಪಯೋಗಿಸಿದ ಬ್ಯಾಂಕ್ ಖಾತೆಯ ಮಾಲಕ ಮೈಸೂರಿನ ಮೃತಪಟ್ಟ ವ್ಯಕ್ತಿಯದ್ದಾಗಿತ್ತೆಂಬುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಆ ಬಗ್ಗೆ ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಮಾದಕದ್ರವ್ಯ ವ್ಯವಹಾರಕ್ಕಾಗಿ ನಕಲಿ ದಾಖಲುಪತ್ರಗಳನ್ನು ತಯಾರಿಸುವ ಜಾಲದ ಬಗ್ಗೆ ಮಾಹಿತಿ ಲಭಿಸಿತ್ತು. ಅದರ ಜಾಡು ಹಿಡಿದು ನಡೆಸಿದ ತನಿಖೆಯಲ್ಲಿ ಮೊಗ್ರಾಲ್ನ ಅಬ್ದುಲ್ ರಹ್ಮಾನ್ ಮತ್ತು ಎರ್ನಾಕುಳಂನ ರಿಶಾದ್ನ್ನು ಬಂಧಿಸಲು ಸಾಧ್ಯವಾಯಿತೆಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ಕಾಸರಗೋಡಿಗೂ ವಿಸ್ತರಿಸಲು ಮುಂದಾಗಿದ್ದಾರೆ. ನಿಧನಹೊಂದಿ ದವರು ಹಾಗೂ ಸಾಮಾನ್ಯವಾಗಿ ಬೀದಿಯಲ್ಲಿ ತಿರುಗಾಡುತ್ತಿರುವವರ ಹೆಸರಲ್ಲಿ ಈ ದಂಧೆಯವರು ನಕಲಿ ಬ್ಯಾಂಕ್ ಖಾತೆಗಳನ್ನು ತಯಾರಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






