ಬದಿಯಡ್ಕ: ರಾಷ್ಟ್ರ ಸ್ವಾಭಿಮಾನಿ ಸಮಿತಿ ಬದಿಯಡ್ಕ ಮಂಡಲ ಇದರ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವದಂಗ ವಾಗಿ ನಿನ್ನೆ ತಿರಂಗ ಯಾತ್ರೆ ನಡೆಯಿತು. ಬೋಳುಕಟ್ಟೆಯಿಂದ ಬದಿಯಡ್ಕ ಪೇಟೆ ವರೆಗೆ ನಡೆದ ಯಾತ್ರೆಯನ್ನು ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂ ಡೋಳುಮೂಲೆ ಇವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿ ಉದ್ಘಾಟಿಸಿದರು.
ಬಿಜೆಪಿ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಪಂಚಾಯತ್ ಅಧ್ಯಕ್ಷರಾದ ಶಂಕರ ಡಿ., ಯಶೋಧ, ಮಾಲಿನಿ, ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ಕೆ.ಎಂ, ರಾಜ್ಯ ಸಮಿತಿ ಸದಸ್ಯ ಹರೀಶ್ ನಾರಂಪಾಡಿ, ಜಿಲ್ಲಾ ಪಂಚಾಯತ್ ಸದಸ್ಯ ರಾಮಪ್ಪ ಮಂಜೇಶ್ವರ, ಅವಿನಾಶ್ ವಿ. ರೈ, ವಿವಿಧ ಪಂಚಾಯತ್ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ರೈ ಗೋಸಾಡ ಸ್ವಾಗತಿಸಿ, ಶ್ರೀಧರ ಬೆಳ್ಳೂರು ವಂದಿಸಿದರು.







