ಪಯ್ಯನ್ನೂರು: ಅಟ್ಟಿಯಿರಿಸಿದ ವಿದ್ಯುತ್ ಕಂಬ ಮೈಮೇಲೆ ಬಿದ್ದು ಯುವಕನಿಗೆ ಧಾರುಣ ಅಂತ್ಯ ಸಂಭವಿಸಿದೆ. ತಳಿಪರಂಬ್ ಕಾಞಿರಂಙಾಟ್ ಚಂದ್ರನ್- ಮಾಧವಿ ದಂಪತಿ ಪುತ್ರ ಅಜೀಶ್ (36) ಮೃತಪಟ್ಟ ಯುವಕ ನಿನ್ನೆ ರಾತ್ರಿ 7 ಗಂಟೆ ವೇಳೆ ದುರಂತ ಘಟನೆ ಸಂಭವಿಸಿದೆ. ರಸ್ತೆ ಬದಿಯಲ್ಲಿ ಅಟ್ಟಿಯಿರಿಸಿದ್ದ ವಿದ್ಯುತ್ ಕಂಬ ಮಗುಜಿ ಅಜೀಶ್‌ರ ಮೈಮೇಲೆ ಬಿದ್ದಿತ್ತು. ಪರಿಸರ ನಿವಾಸಿಗಳ ನೇತೃತ್ವದಲ್ಲಿ ಕೂಡಲೇ ಅಜೀಶ್‌ನನ್ನು ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ದುರಂತದ ಬಗ್ಗೆ ತಳಿಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ.







