ಕಲ್ಲಿಕೋಟೆ: ಅಪ್ರಾಪ್ತೆಯನ್ನು ಕೊಲೆಗೈದ ಬಳಿಕ ಮೃತದೇಹದ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಆರೋಪಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಕಲ್ಲಿಕೋಟೆ ಮಾಳಿಕಡವಿನ ಸ್ವಂತ ಗ್ಯಾರೇಜ್ ಹೊಂದಿರುವ ವೆಂಙಾರಿ ತಡಂಬಾಟ್ಟುತಾಳಂ ಪಿಸ್ ಗಾರ್ಡನ್‌ನ ವೈಶಾಖ್ (35) ಸಾವನ್ನಪ್ಪಿದ ವ್ಯಕ್ತಿ. ಈತ ತನ್ನ ಮನೆಯಲ್ಲಿ ನಿನ್ನೆ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಬಳಿಕ ಆತನನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಅದು ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾನೆ.
ವಿವಾಹಿತನಾಗಿರುವ ಆರೋಪಿ ವೈಶಾಖ್ ಅಪ್ರಾಪ್ತೆಯೊಂದಿಗೆ ನಂಟು ಹೊಂದಿದ್ದನು. ಆ ಬಳಿಕ ಆತ ಇನ್ನೋರ್ವೆ ಯುವತಿಯೊಂದಿಗೆ ಪ್ರೇಮ ಸಲ್ಲಾಪದಲ್ಲಿ ತೊಡಗಿದ್ದನು. ಆ ವಿಷಯ ತಿಳಿದು ಅಪ್ರಾಪ್ತೆ ಕ್ಷುಪಿತಗೊಂಡು ಆ ವಿಷಯವನ್ನು ಪತ್ನಿಗೆ ತಿಳಿಸುವುದಾಗಿ ಬೆದರಿಕೆಯೊಡ್ಡಿದ್ದನೆನ್ನಲಾಗಿದೆ. ಆ ದ್ವೇಷದಿಂದ ವೈಶಾಖ್ ಆಕೆಯನ್ನು ಕಳೆದ ಜನವರಿ 24ರಂದು ಕಲ್ಲಿಕೋಟೆ ಮಾಳಿಕಡವಿನಲ್ಲಿರುವ ಆತನ ಸ್ವಂತ ಗ್ಯಾರೇಜ್‌ಗೆ ಕರೆದೊಯ್ದು ನಾವಿಬ್ಬರು ಒಟ್ಟಿಗೆ ಆತ್ಮಹತ್ಯೆಗೈಯ್ಯುವ ಎಂದು ಆಕೆಗೆ ತಿಳಿಸಿ ಅದರಂತೆ ಆಕೆಯನ್ನು ಮೊದಲು ಮರದ ಸ್ಟೂಲ್‌ಗೆ ಏರಿಸಿ ಪಕ್ಕಾಸಿಗೆ ಹಗ್ಗಕಟ್ಟಿ ಅದರ ತುದಿಯನ್ನು ಆಕೆಯ ಕುತ್ತಿಗೆಗೆ ಬಿಗಿದು ಕೊಲೆಗೈದ ನೆಂದೂ, ನಂತರ ಆಕೆಯನ್ನು ಅಲ್ಲಿಂದ ಕೆಳಗಿಳಿಸಿ ಮೃತದೇಹಕ್ಕೆ ಅತ್ಯಾಚಾರವೆಸ ಗಿನೆಂದು ಆರೋಪಿಸಲಾಗಿದೆ. ನಂತರ ಆತನೇ ಮೃತದೇಹವನ್ನು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದನು. ಈ ಪ್ರಕರಣದಲ್ಲಿ ಬಂಧಿತನಾಗಿ ೮೪ ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿದ್ದ ಈತ ದಿನಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ನಂತರ ಆತ ನಿನ್ನೆ ತನ್ನ ಮನೆಯಲ್ಲಿ ಗಂಭೀರಾ ವಸ್ಥೆಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.







