ಬದಿಯಡ್ಕ ಕೃಷಿಭವನದಿಂದ ಕೃಷಿಕರ ದಿನಾಚರಣೆ, ಸನ್ಮಾನ

ಬದಿಯಡ್ಕ: ಬದಿಯಡ್ಕ ಪಂ.ಕೃಷಿಭವನದ ನೇತೃತ್ವದಲ್ಲಿ ನಿನ್ನೆ ಬದಿಯಡ್ಕ ಕನ್ಯಾನ ಕನ್ವೆನ್ಶನ್ ಹಾಲ್‌ನಲ್ಲಿ ಕೃಷಿಕರ ದಿನಾಚರಣೆ ನಡೆಯಿತು. ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಉದ್ಘಾಟಿಸಿ, ಮಾತನಾಡುತ್ತಾ ಆಧುನಿಕ ಯುಗದಲ್ಲಿ ಕೃಷಿ ಎದುರಿಸುತ್ತಿರುವ ಸವಾಲುಗಳು ಸಣ್ಣದಲ್ಲ. ಹವಾಮಾನ ವೈಪರೀತ್ಯ, ಕೀಟಬಾಧೆ, ಕಾರ್ಮಿಕರ ಅಭಾವ ಮತ್ತು ಸೂಕ್ತ ಮಾರುಕಟ್ಟೆ ಬೆಲೆಯ ಕೊರತೆ ರೈತರನ್ನು ಕಾಡುತ್ತಿದೆ. ಯುವಕರು ಕೃಷಿಕರತ್ತ ಆಕರ್ಷಿತರಾಗಬೇಕು ಎಂದು ಕರೆಯಿತ್ತರು. ಬದಿಯಡ್ಕ ಪಂ. ಅಧ್ಯಕ್ಷ ಶಂಕರ ಡಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಾಯತ್ ವ್ಯಾಪ್ತಿಯಲ್ಲಿ ತೆಂಗು, ಅಡಿಕೆ, ಭತ್ತ, ಕಾಳುಮೆಣಸು, ತರಕಾರಿ ಹಾಗೂ ಹೂವಿನ ಕೃಷಿಯನ್ನು ನೆಚ್ಚಿಕೊಂಡು ಬಾಳುವ ಸಾವಿರಾರು ಕುಟುಂಬಗಳಿವೆ. ಕೃಷಿ ಎಂಬುದು ನಮ್ಮ ಸಂಸ್ಕೃತಿ ಮತ್ತು ಪಾರಂಪರಿಕ ಶಕ್ತಿ. ಕೃಷಿಯನ್ನು ಮುಂದುವರಿಸಿ ಕೊಂಡು ಹೋಗುವಲ್ಲಿ ಯುವಕರು ಮುಂದೆಬರಬೇಕು ಎಂದರು

. ಪಂಚಾಯತ್ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಬ್ಲೋಕ್ ಪಂ. ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಎಂ.ಎಸ್.ಮೊಯ್ದು, ಜಿಲ್ಲಾ ಪಂ. ಸದಸ್ಯ ರಾಮಪ್ಪ ಮಂಜೇಶ್ವರ, ಬದಿಯಡ್ಕ ಪಂ. ಸ್ಥಾಯಿಸಮಿತಿ ಅಧ್ಯಕ್ಷರಾದ ಹಮೀದ್ ಕೆಡೆಂಜಿ, ರಜನಿ ಜಿ.ಆರ್., ಅವಿನಾಶ್ ರೈ, ಬ್ಲೋಕ್ ಪಂ. ಸದಸ್ಯ ಖಾದರ್ ಮಾನ್ಯ, ಸಿಡಿಎಸ್ ಅಧ್ಯಕ್ಷೆ ಸುಲೋಚನ, ವಿವಿಧ ವಾರ್ಡುಗಳ ಜನಪ್ರತಿನಿದಿಗಳು, ವಿವಿಧ ಪಕ್ಷಗಳ ಪ್ರಮುಖರು ಪಾಲ್ಗೊಂಡಿದ್ದರು. ಸಾಧಕ ಕೃಷಿಕರಾದ ರಘುನಾಥ ರೈ ಮೇಗಿನಕಡಾರು, ವಾಮನ ನಾಯ್ಕ ಏಳ್ಕಾನ, ಕೃಷ್ಣಪ್ರಸಾದ ಅಮ್ಮಂಗಲ್ಲು, ಚಂದ್ರ ಜಿ.ಗೋಳಿಯಡ್ಕ, ಮೀನಾಕ್ಷಿ ಪುರಂದರ ರೈ ವಳಮಲೆ, ವಿನೋದ್ ಮೇಗಿನಡ್ಕ, ರವಿಶಂಕರ ಕೆ.ಕೊಲ್ಲಂಪಾರೆ, ಮಶೂದ್ ಏವಿಂಜ ಇವರನ್ನು ಅಭಿನಂದಿಸಲಾಯಿತು. ಕೃಷಿ ಅದಿsಕಾರಿ ಬಿಂದು ಜೋರ್ಜ್ ಸ್ವಾಗತಿಸಿ, ಸಹಾಯಕ ಕೃಷಿ ಅದಿsಕಾರಿ ಮೋಹನನ್ ಸಿ. ವಂದಿಸಿದರು.

RELATED NEWS

You cannot copy contents of this page