ಬಿಎಂಎಸ್ ರಾಷ್ಟ್ರೀಯ ಆಂದೋಲನದಂಗವಾಗಿ ಮೆರವಣಿಗೆ, ಸಾರ್ವಜನಿಕ ಸಭೆ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘ್‌ನ ರಾಷ್ಟ್ರೀಯ ಆಂದೋಲನದಂಗವಾಗಿ ಕಾಸರಗೋಡಿನಲ್ಲಿ ಮೆರವಣಿಗೆ ಹಾಗೂ ಸಾರ್ವಜನಿಕ ಸಮ್ಮೇಳನ ನಡೆಸಲಾಯಿತು. ಕರಂದಕ್ಕಾಡ್‌ನಿಂದ ಆರಂಭಿಸಿದ ಕಾರ್ಮಿಕರ ಮೆರವಣಿಗೆ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಸಮಾಪ್ತಿಗೊಂಡಿತು. ಸಾರ್ವಜನಿಕ ಸಮ್ಮೇಳನವನ್ನು ಬಿಎಂಎಸ್ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ ಅಧ್ಯಕ್ಷತೆ ವಹಿಸಿದರು.

೨೯ ಕಾರ್ಮಿಕ ಕಾನೂನುಗಳನ್ನು ನಾಲ್ಕು ಕೋಡ್‌ಗಳಾಗಿ ಲೇಬರ್ ಕೋಡ್ ಕೇಂದ್ರ ಸರಕಾರ ಕಾನೂನು ಮಾಡಿದಾಗ ಅದರ ಇಂಡಸ್ಟ್ರಿಯಲ್ ರಿಲೇಶನ್ಸ್ ಕೋಡ್, ಒಕ್ಯುಪೇಶನ್ ಸೇಫ್ಟಿ ಹೆಲ್ತ್ ವರ್ಕಿಂಗ್ ಕಂಡೀಶನ್ ಕೋಡ್‌ನ ಕಾರ್ಮಿಕ ದ್ರೋಹ ವ್ಯವಸ್ಥೆಯನ್ನು ತೆರವುಗೊಳಿಸಬೇಕು, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸ್ಕೀಂವರ್ಕ್ಸ್‌ನ ಗೌರವ ಧನ ಹೆಚ್ಚಿಸಬೇಕು, ಅವರನ್ನು ಸರಕಾರಿ ನೌಕರರಾಗಿ ಅಂಗೀಕರಿಸಬೇಕು, ಇಎಸ್‌ಐ, ಇಪಿಎಫ್ ಮಿತಿ ಹೆಚ್ಚಿಸಬೇಕು ಎಂಬೀ 12ರಷ್ಟು ಬೇಡಿಕೆಗಳನ್ನು ಮುಂದಿಟ್ಟು ಆಂದೋಲನ ನಡೆಸಲಾಗುವುದು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ರಾಜ್ಯ ಸಮಿತಿ ಸದಸ್ಯರಾದ ವಿ.ವಿ. ಬಾಲಕೃಷ್ಣನ್, ಎಂ.ಕೆ. ಉಣ್ಣಿಕೃಷ್ಣನ್, ಟಿ. ಕೃಷ್ಣನ್ ಎಂಬಿವರು ಮಾತನಾಡಿದರು.

ಜಿಲ್ಲಾ ಉಪಾಧ್ಯಕ್ಷ ಭರತನ್ ಸ್ವಾಗತಿಸಿ, ಗೀತಾ ಬಾಲಕೃಷ್ಣನ್ ವಂದಿಸಿದರು. ಮೆರವಣಿಗೆಗೆ ಜಿಲ್ಲಾ ಪದಾಧಿಕಾರಿಗಳಾದ ದಿನೇಶ್ ಬಂಬ್ರಾಣ, ಮಿನಿ ಶ್ರೀನಿವಾಸನ್, ಸುನಿಲ್ ಮುಲ್ಲಚ್ಚೇರಿ, ಅನಿಲ್ ಬಿ. ನಾಯರ್, ಗುರುದಾಸ್ ಮಧೂರು, ಪ್ರದೀಪ್ ಕೇಳೋತ್, ಹರೀಶ್ ಕುದ್ರೆಪ್ಪಾಡಿ, ಭಾಸ್ಕರ ಪೊಯಿನಾಚಿ, ಯಶ್ವಂತಿ ಮೀಂಜ, ಮನೀಶ್, ಲೀಲಾಕೃಷ್ಣನ್ ನೇತೃತ್ವ ನೀಡಿದರು.

RELATED NEWS

You cannot copy contents of this page