ಕಾಸರಗೋಡು: ಜಾಮೀಯ ಸಅದಿಯ ಕ್ಯಾಂಪಸ್ನಲ್ಲಿ ನೂತನವಾಗಿ ನಿರ್ಮಿಸಿದ ಜಾಮಿಉ ಹಬೀಬ್ ಉಸ್ಮಾನ್ ಗ್ರಾಂಡ್ ಮಸೀದಿಯನ್ನು ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸಿದರು. ಅಧ್ಯಕ್ಷ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಳ್ ವಕ್ಫ್ ಕಾರ್ಯ ನೆರವೇರಿಸಿದರು. ಹಾಮೀದ್ ಇಂಬಿಚ್ಚಿಕೋಯ ಅಲ್ಬುಖಾರಿ ಪ್ರಾರ್ಥನೆ ನಡೆಸಿದರು. ಸಹಅದಿಯ ಕೋಶಾಧಿಕಾರಿ ಕಲ್ಲಟ್ರ ಮಾಹಿನ್ ಹಾಜಿ, ಎ.ಪಿ. ಅಬ್ದುಲ್ಲ ಮುಸ್ಲಿಯಾರ್ ಮಾಣಿಕೋತ್ ಮಾತನಾಡಿದರು. ಕರ್ನಾಟಕ ಸಚಿವ ಯು.ಟಿ. ಖಾದರ್, ಶಾಸಕ ಎ.ಕೆ.ಎಂ. ಅಶ್ರಫ್, ಮೊಹಮ್ಮದ್ ಅಲಿ ಹಬೀಬ್ ಉಸ್ಮಾನ್, ಹಬೀಬ್ ಅಹಮ್ಮದ್ ಉಸ್ಮಾನ್ ಮುಖ್ಯ ಅತಿಥಿಗಳಾಗಿದ್ದರು. ಹಲವರು ಗಣ್ಯರು ಭಾಗವಹಿಸಿದರು. ನಿನ್ನೆ ಸೌಹಾರ್ದ ಸಂಗಮ ಜರಗಿದ್ದು, ಉಪಾಧ್ಯಕ್ಷ ಮೊಹಮ್ಮದಲಿ ಸಖಾಫಿ ತೃಕ್ಕರಿಪುರ ಅಧ್ಯಕ್ಷತೆ ವಹಿಸಿದರು. ಶಾಸಕ ಕೆ. ನೀಲಕಂಠನ್ ಸೌಹಾರ್ದ ಸಂಗಮ ಉದ್ಘಾಟಿಸಿದರು.







