ಉಪ್ಪಳ: ಬೈಕ್ ಹಾಗೂ ಟ್ಯಾಂಕರ್ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು.
ಪೈವಳಿಕೆ ಚಿಪ್ಪಾರು ಕಡೆಂಕೋಡಿ ಅಡ್ಕತ್ತಿಮಾರ್‌ನ ಬಾಲಕೃಷ್ಣ ಎಂಬವರ ಪುತ್ರ ಕಿರಣ್ ಕುಮಾರ್ (34) ಮೃತಪಟ್ಟ ದುರ್ದೈವಿ.
ಮೊನ್ನೆ ಸಂಜೆ ವಾಮಂಜೂರು ಅಬಕಾರಿ ಚೆಕ್ ಪೋಸ್ಟ್ ಸಮೀಪ ಅಪಘಾತ ಸಂಭವಿಸಿತ್ತು. ಬೈಕ್‌ನಲ್ಲಿದ್ದ ಕಿgಣ್ ಕುಮಾರ್ ಹಾಗೂ ಕೋಡಿಬೈಲು ಬಳಂಕುಡೆಯ ಹರೀಶ್ (40) ಎಂಬಿವರು ಗಾಯಗೊಂಡಿದ್ದರು. ಇವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸ್ಸೆ ಫಲಕಾರಿಯಾಗದೆ ಕಿರಣ್ ಕುಮಾರ್ ನಿನ್ನೆ ಮಧ್ಯಾಹ್ನ ಮೃತಪಟ್ಟರು. ಇದೇ ವೇಳೆ ಹರೀಶ್‌ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿದೆ.
ಕಿರಣ್ ಕುಮಾರ್‌ರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಸ್ವ-ಗೃಹಕ್ಕೆ ತಲುಪಿಸಿ ಬೋಳಂಗಳ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಮೃತರು ತಂದೆ, ತಾಯಿ ಕಮಲಾಕ್ಷಿ, ಸಹೋದರ ಅರುಣ್ ಕುಮಾರ್, ಸಹೋದರಿ ಆಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






