ಕಾಸರಗೋಡು: ವಾಸಿಯಾಗದ ಗಂಟಲುನೋವಿನಿಂದ ಮನನೊಂದು ಗೃಹಿಣಿ ಹಟ್ಟಿಯಲ್ಲಿ ನೇಣು ಬಿಗಿದು ಮೃತಪಟ್ಟ ಘಟನೆ ನಡೆದಿದೆ. ಮುಳ್ಳೇರಿಯ ಕಾರ್ಲೆ ನಿವಾಸಿ ವಿಜಯ ಎಂಬವರ ಪತ್ನಿ ಸುಲೋಚನ (46) ಮೃತಪಟ್ಟವರು. ಮೊನ್ನೆ ರಾತ್ರಿ ಆಹಾರ ಸೇವಿಸಿ ನಿದ್ರಿಸಿದ್ದು ಆದರೆ ನಿನ್ನೆ ಬೆಳಿಗ್ಗೆ ನೋಡುವಾಗ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಹಟ್ಟಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆದೂರು ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ.
ಅಡೂರು ನಿವಾಸಿ ಅಂಬಾಡಿ- ಲಕ್ಷ್ಮಿ ದಂಪತಿ ಪುತ್ರಿಯಾದ ಸುಲೋಚನ ಪತಿ, ಮಕ್ಕಳಾದ ಋತೇಶ್, ಋತಿಕ, ಮನ್ವಿತ್, ಸಹೋದರರಾದ ಪ್ರಕಾಶ್, ಪದ್ಮನಾಭ, ಸಹೋದರಿ ಪುಷ್ಪ ಹಾಗೂ ಅಪಾಕ ಬಂಧು-ಮಿತ್ರರನ್ನು ಅಗಲಿದ್ದಾರೆ.






