ಹತ್ತನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಹತ್ತನೇ ತರಗತಿ ವಿದ್ಯಾರ್ಥಿಯೋರ್ವ ಮನೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳಿಕೆರೆ ಕೀಕಾನದ ಧ್ಯಾನ್‌ರಾಜ್ (15) ಸಾವಿಗೀಡಾದ ಬಾಲಕ. ಈತ ಕಾಸರಗೋಡಿನ ಶಾಲೆಯೊಂದರ ವಿದ್ಯಾರ್ಥಿಯಾಗಿದ್ದಾನೆ  ಧ್ಯಾನ್ ರಾಜ್ ನಿನ್ನೆ ಸಂಜೆ ಮನೆಯ ಅಡ್ಡಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದನು. ಕೂಡಲೇ ಅತನನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಪರೀಕ್ಷೆಯಲ್ಲಿ ಅಂಕ ಕಡಿಮೆಯಾದುದರಿಂದ ಮನನೊಂದು ಈತ ನೇಣು ಹಾಕಿ ಸಾವಿಗೆ ಶರಣಾಗಿರಬಹುದೇ ಎಂದು ಸಂಶಯಿಸಲಾಗುತ್ತಿದೆಯೆಂದು  ಹೇಳಲಾಗುತ್ತಿದೆ.

ಘಟನೆ ಬಗ್ಗೆ ಬೇಕಲ ಪೊಲೀಸರು ಅಸಹಜ ಸಾವು ಪ್ರಕರಣ ದಾಲಿಸಿಕೊಂಡಿದ್ದಾರೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯ ನೌಕರನಾದ ರಾಜೇಶ್ ಕುಮಾರ್ ಹಾಗೂ ಮಾನ್ಯ ಕಲ್ಲಕಟ್ಟದ ಅಧ್ಯಾಪಿಕೆಯಾದ ನಿರೀಕ್ಷಾ ದಂಪತಿಯ ಪುತ್ರನಾದ ಮೃತ ಬಾಲಕ ಸಹೋದರಿ  ತನ್ವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

You cannot copy contents of this page