ಮಾರ್ಪನಡ್ಕ: ಭಾರತೀಯ ಸ್ಥಳೀಯ ಗೋ ತಳಿಗಳಿಗೆ ರಾಷ್ಟ್ರೀಯ ಗೌರವವನ್ನು ಒದಗಿಸುವಂತೆ ಆಗ್ರಹಿಸಿ, ದೇಶಾದ್ಯಂತ ೪೦ ಕೋಟಿ ಸಹಿಗಳನ್ನು ಸಂಗ್ರಹಿಸಿ ಭಾರತದ ರಾಷ್ಟ್ರಪತಿಗೆ ಮನವಿ ಸಲ್ಲಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ಗೋ ಸಮ್ಮಾನ್ ಆವಾಹನ್ ಅಭಿಯಾನ’ಕ್ಕೆ ಕುಂಬ್ದಾಜೆ ಪಂಚಾಯತ್ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಯಿತು.
ಅಕ್ಟೋಬರ್ ೨೭ರಂದು ರಾಷ್ಟ್ರಪತಿಗೆ ಸಲ್ಲಿಸಲಿರುವ ಈ ಮನವಿಗೆ ನಿವೃತ್ತ ಜಿಲ್ಲಾ ಮೆಡಿಕಲ್ ಮಾಸ್ ಆಫೀಸರ್, ಕುಂಬ್ದಾಜೆ ಹಿಂದೂ ಸಮಾಜೋತ್ಸವದ ಗೌರವಾಧ್ಯಕ್ಷ ರಾಮಚಂದ್ರ ಪದ್ಮಾರ್ ಮಾರ್ಪನಡ್ಕ ಪ್ರಥಮ ಸಹಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಭಾರತೀಯ ಸಂಸ್ಕೃತಿ, ಕೃಷಿ ಪರಂಪರೆ ಹಾಗೂ ಗ್ರಾಮೀಣ ಜೀವನದಲ್ಲಿ ಸ್ಥಳೀಯ ಗೋ ತಳಿಗಳಿಗೆ ಇರುವ ಮಹತ್ವವನ್ನು ಪ್ರತಿಬಿಂಬಿಸುವ ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ತಮ್ಮ ಸಹಿಯನ್ನು ನೀಡುವ ಮೂಲಕ ಬೆಂಬ ಲಿಸಬೇಕೆಂದು ಕರೆ ನೀಡಲಾಯಿತು.
‘ಸ್ಥಳೀಯ ಗೋ ತಳಿಗಳ ಸಂರಕ್ಷಣೆ ಭಾರತೀಯ ಪರಂಪರೆಯ ರಕ್ಷಣೆ’ ಎಂಬ ಆಶಯದೊಂದಿಗೆ ನಡೆಯುತ್ತಿರುವ ಈ ಸಹಿ ಅಭಿಯಾನ ಜನಜಾಗೃತಿ ಮೂಡಿಸುವ ಜೊತೆಗೆ ಸ್ಥಳೀಯ ಗೋ ತಳಿಗಳ ಮಹತ್ವವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಪಾದಿಸುವ ಪ್ರಯತ್ನವಾಗಿದೆ.





