ನಾಪತ್ತೆಯಾದ ಯುವತಿ, ಮಗಳ ಮಾಹಿತಿ ಅಲಭ್ಯ ತನಿಖೆ ತೀವ್ರ

ಕಾಸರಗೋಡು: ಉದುಮ ಪಡಿಞ್ಞಾರ್‌ನಿಂದ ನಾಪತ್ತೆಯಾದ ಯುವತಿ ಹಾಗೂ ಆರರ ಹರೆಯದ ಪುತ್ರಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ತಚ್ಚರಕುನ್ನು ನಿವಾಸಿಯಾದ ಹಾರಿಸ್ ಎಂಬವರ ಪತ್ನಿ ಫಾತಿಮತ್ ಬುಶ್ರ(28) ಹಾಗೂ  ಆಕೆಯ ಆರು ವರ್ಷದ  ಮಗಳು  ಸೆಪ್ಟಂಬರ್ 8ರಂದು ರಾತ್ರಿಯಿಂದ ನಾಪತ್ತೆಯಾ ಗಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಸಹೋದರಿ ನೀಡಿದ ದೂರಿನಂತೆ ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಮೊಬೈಲ್ ಫೋನ್ ನಂಬ್ರ ಕೇಂದ್ರೀಕರಿಸಿ ನಡೆಸಿದ ತನಿಖೆಯ  ಆರಂಭದಲ್ಲಿ ಕೆಲವು ಸೂಚನೆಗಳು ಲಭಿಸಿತ್ತು. ಆದರೆ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಯುವತಿ ಹಾಗೂ ಪುತ್ರಿ ನಾಪತ್ತೆ ಯಾಗಿ ಒಂದು ವಾರ ಕಳೆದರೂ ಅವರನ್ನು ಪತ್ತೆಹಚ್ಚಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸ್ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಲಾಗಿದೆ.

RELATED NEWS

You cannot copy contents of this page