ಫ್ಲೈವುಡ್ ಕಂಪೆನಿ ಸಮೀಪ ಬೆಂಕಿ: ತಪ್ಪಿದ ದುರಂತ

ಉಪ್ಪಳ: ಮಂಜೇಶ್ವರ ಬಳಿಯ ದುರ್ಗಿಪಳ್ಳದಲ್ಲಿ ಫ್ಲೈವುಡ್ ಕಂಪೆನಿ ಸಮೀಪ ಬೆಂಕಿ ಕಾಣಿಸಿಕೊಂಡಿದ್ದು ಕೂಡಲೇ ತಲುಪಿದ ಅಗ್ನಿಶಾಮಕದಳ ಬೆಂಕಿ ನಂದಿಸಿದುದರಿಂದ ಭಾರೀ ದುರಂತ ತಪ್ಪಿದೆ.

ನಿನ್ನೆ ಮಧ್ಯಾಹ್ನ ವೇಳೆ ಘಟನೆ ನಡೆದಿದೆ. ಫ್ಲೈವುಡ್ ಕಂಪೆನಿ ಸಮೀಪ ರಾಶಿ ಹಾಕಲಾಗಿದ್ದ ಮರದ ತುಂಡುಗಳಿಗೆ ಬೆಂಕಿ ಹತ್ತಿಕೊಂಡಿದೆ. ಕೂಡಲೇ ನೀಡಿದ ಮಾಹಿತಿಯಂತೆ ಅಗ್ನಿಶಾಮಕದಳದ ಸ್ಟೇಶನ್ ಆಫೀಸರ್ ರಾಜೇಶ್ ನೇತೃತ್ವದಲ್ಲಿ ಉಪ್ಪಳ ಹಾಗೂ ಕಾಸರಗೋಡಿನಿಂದ ತಲುಪಿದ ಅಗ್ನಿಶಾಮಕದಳ ಕಾರ್ಯಾ ಚರಣೆ ನಡೆಸಿ ಬೆಂಕಿ ನಂದಿಸಿದೆ.  ಇದರಿಂದ ಬೆಂಕಿ ಹರಡುವುದನ್ನು ತಪ್ಪಿಸಲು ಸಾಧ್ಯವಾಯಿತು.

RELATED NEWS

You cannot copy contents of this page