ಕ.ಸಾ.ಪದಿಂದ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ: ಕನ್ನಡ ಪತ್ರಕರ್ತರೊಂದಿಗೆ ಸೌಹಾರ್ದ ಸಂವಾದ

ಕಾಸರಗೋಡು:  ಕನ್ನಡ ಸಾಹಿತ್ಯ ಪರಿಷತ್‌ನ ಸಂಸ್ಥಾಪಕರಲ್ಲೊಬ್ಬರಾದ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಹಾಗೂ ಕನ್ನಡ ಪತ್ರಕರ್ತ ರೊಂದಿಗೆ ಸೌಹಾರ್ದ ಸಂವಾದ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಅಡ್ಕತ್ತಬೈಲ್ ನಲ್ಲಿರುವ ಹೋಟೆಲ್ ಉಡುಪಿ ಗಾರ್ಡನ್‌ನ ಸಭಾಂಗಣದಲ್ಲಿ ನಡೆಯಿ ತು.  ಹಿರಿಯ ಸಾಹಿತಿ ರಾಧಾಕೃಷ್ಣ ಕೆ ಉಳಿಯತ್ತಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸರ್ ಎಂ. ವಿಶ್ವೇಶ್ವರಯ್ಯ ನವರ ಬದುಕು, ವ್ಯಕ್ತಿತ್ವ, ಸಾಧನೆಗಳ ಕುರಿತು ಮಾತನಾಡಿದರು. ಕ.ಸಾ.ಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ| ಜಯಪ್ರಕಾಶ್ ನಾರಾಯಣ ತೊಟ್ಟೆ ತ್ತೋಡಿ ಅಧ್ಯಕ್ಷತೆ ವಹಿಸಿದರು. ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಉಪಸ್ಥಿತರಿದ್ದರು. ಕ.ಸಾ.ಪ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು. ವಿ.ಜಿ. ಕಾಸರಗೋಡು ನಿರೂಪಿಸಿ ದರು. ಬಳಿಕ ಕಾಸರಗೋಡಿನ ಕನ್ನಡ ಪತ್ರಕರ್ತರೊಂದಿಗೆ ಸೌಹಾರ್ದ ಸಂವಾದ ನಡೆಯಿತು.  ಮಲಾರ್ ಜಯರಾಮ ರೈ ಸಂವಾದಕ್ಕೆ ಚಾಲನೆ ನೀಡಿದರು.  ಹಲವರು ಉಪಸ್ಥಿತರಿದ್ದರು.

You cannot copy contents of this page