ಪೆರ್ಲ: ಮೂಲತಃ ಬೆಳ್ಳೂರು ಅಡ್ವಳ ನಿವಾಸಿಯಾಗಿದ್ದ, ಈಗ ಶೇಣಿಯಲ್ಲಿ ವಾಸವಾಗಿದ್ದ ಪಿ. ರಾಮಚಂದ್ರ ಬಲ್ಲಾಳ್ (60) ನಿಧನ ಹೊಂದಿದರು. ಅಲ್ಪ ಸಮಯದಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿನ್ನೆ ನಿಧನ ಸಂಭವಿಸಿದೆ.
ಮೃತರು ಪತ್ನಿ ಸುಕನ್ಯಾ, ಮಕ್ಕಳಾದ ಮಂಜುಶ್ರೀ, ನೇತ್ರಾ, ಸಹೋದರ ಗೋಪಾಲಕೃಷ್ಣ ಪಿ, ಸಹೋದರಿಯರಾದ ಪದ್ಮಾವತಿ, ಲಲಿತಾ, ಗಿರಿಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






