ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳಿಗೆ ಇಂದು ಚಾಲನೆ: ಪೆರಿಯದಲ್ಲಿ ಗೆಜ್ಜೆ ಕಲರವ

ಕಾಸರಗೋಡು: ಪೆರಿಯ ಶಾಲೆಯಲ್ಲಿ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳು ಇಂದು ಆರಂಭಗೊಂಡಿತು. ಇನ್ನು ಮೂರು ದಿನ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸುವರು. ಒಪ್ಪನ, ವಟ್ಟಪ್ಪಾಟ್, ನಾಟಕ, ವೃಂದವಾದ್ಯ, ಭರತನಾಟ್ಯ, ಸಾಮೂಹಿಕ ನೃತ್ಯ, ಓಟ್ಟಂತುಳ್ಳಲ್, ಕೂಚುಪುಡಿ ಮೊದಲಾದ ನೃತ್ಯ ಸ್ಪರ್ಧೆಗಳು ಅಲ್ಲದೆ ಏಕಪಾತ್ರಾಭಿನಯ, ಭಾಷಣ, ಮಿಮಿಕ್ರಿ, ಬ್ಯಾಂಡ್ ಮೇಳ, ಶಾಸ್ತ್ರೀಯ ಸಂಗೀತ ಮೊದಲಾದ ಸ್ಪರ್ಧೆಗಳು ನಡೆಯಲಿದೆ. ಇಂದು ಸಂಜೆ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಕಲೋತ್ಸವವನ್ನು ಔಪಚಾರಿಕವಾಗಿ ಉದ್ಘಾಟಿಸುವರು. ಇದುವರೆಗೆ ನಡೆದ ವೇದಿಕೇತರ ಸ್ಪರ್ಧೆಗಳಲ್ಲಿ 244 ಅಂಕ ಪಡೆದ ಕಾಸರಗೋಡು ಉಪಜಿಲ್ಲೆ ತನ್ನ ಮುನ್ನಡೆಯನ್ನು ಕಾಯ್ದಿರಿಸಿಕೊಂಡಿದೆ. 234 ಅಂಕದಂತೆ ಪಡೆದ ಕುಂಬಳೆ ಹಾಗೂ ಬೇಕಲ ಉಪಜಿಲ್ಲೆಗಳು ದ್ವಿತೀಯ ಸ್ಥಾನದಲ್ಲಿವೆ. ಚೆರುವತ್ತೂರು (321) ಮೂರನೇ ಸ್ಥಾನದಲ್ಲಿದ್ದರೆ, ಹೊಸದುರ್ಗ (228), ಚಿತ್ತಾರಿಕಲ್ (226), ಮಂಜೇಶ್ವರ (210) ಅಂಕ ಪಡೆದು ನಂತರದ ಸ್ಥಾನದಲ್ಲಿದೆ.

ಶಾಲಾ ಮಟ್ಟದಲ್ಲಿ 68 ಅಂಕ ಪಡೆದ ಕಾಞಂಗಾಡ್ ದುರ್ಗಾ ಎಚ್‌ಎಸ್‌ಎಸ್ ಪ್ರಥಮ ಸ್ಥಾನದಲ್ಲಿದೆ. ಚಾಯೋತ್ತ್ ಜಿಎಚ್‌ಎಸ್ (61) ದ್ವಿತೀಯ ಸ್ಥಾನ ಪಡೆದಿದ್ದರೆ ಉದುಮ ಜಿಎಚ್‌ಎಸ್‌ಎಸ್ (60) ತೃತೀಯ ಸ್ಥಾನ ಪಡೆದಿದ್ದು, ಮಂಜೇಶ್ವರ ಎಸ್‌ಎಟಿಎಚ್‌ಎಸ್ (55), ಪಿಲಿಕ್ಕೋಡ್ ಜಿಎಚ್‌ಎಸ್‌ಎಸ್ (5೦) ನಂತರದ ಸ್ಥಾನದಲ್ಲಿದೆ.

RELATED NEWS

You cannot copy contents of this page