ಇಸ್ರೇಲ್‌ಗೆ ತೆರಳುತ್ತಿರುವ ಬಿಜೆಪಿ ಜಿಲ್ಲಾಧ್ಯಕ್ಷೆ  ಎಂ.ಎಲ್. ಅಶ್ವಿನಿಗೆ ಬೀಳ್ಕೊಡುಗೆ

ಕಾಸರಗೋಡು: ಭಾರತದ ಯುವ ರಾಜಕೀಯ ನಾಯಕತ್ವದ ಪ್ರತಿನಿಧಿಯಾಗಿ ಇಸ್ರೇಲ್‌ಗೆ ಅಧಿಕೃತ ಪ್ರವಾಸ ಕೈಗೊಳ್ಳುತ್ತಿರುವ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿಯವರಿಗೆ ಬಿಜೆಪಿ ಕಾಸರಗೋಡು ಮಂಡಲ ಸಮಿತಿ ನೇತೃತ್ವದಲ್ಲಿ ಬೀಳ್ಕೊಡುಗೆ ನೀಡಲಾಯಿತು. ಕೇರಳದಿಂದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೂಪ್ ಆಂಟನಿ, ರಾಜ್ಯ ಉಪಾಧ್ಯಕ್ಷ ಶೋನ್ ಜೋರ್ಜ್ ಅವರನ್ನೊಳಗೊಂಡ 16 ಮಂದಿಯ ನಿಯೋಗದ ಪ್ರತಿನಿಧಿಯಾಗಿ ಅಶ್ವಿನಿ ಇಸ್ರೇಲ್‌ಗೆ ತೆರಳುತ್ತಿದ್ದಾರೆ.

ಡಿಸೆಂಬರ್ 7ರಂದು ತಂಡ ಭಾರತಕ್ಕೆ ಹಿಂತಿರುಗಲಿದೆ. ಪ್ರವಾಸದ ಅಂಗವಾಗಿ ನಿಯೋಗವು ಜೆರುಸಲೇಂ, ಟೆಲ್‌ಅವೀವ್, ಗಾಜಾ, ಹೈಫ ಮೊದ ಲಾದ ಪ್ರದೇಶಗಳಿಗೆ ಭೇಟಿ ನೀಡಲಿದೆ. ಜೊತೆಗೆ ಇಸ್ರೇಲ್‌ನ ವಿವಿಧ ಸಚಿವರು ಮತ್ತು ಉನ್ನತ ಅಧಿಕಾರಿಗಳೊಂದಿಗೆ ತಂಡ ಮಾತುಕತೆ ನಡೆಸಲಿದೆ.

ಬೀಳ್ಕೊಡುಗೆ ಸಮಾರಂಭದಲ್ಲಿ ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ್ ಕುದ್ರೆಪ್ಪಾಡಿ, ಮಂಡಲ  ಪ್ರಧಾನ ಕಾರ್ಯದರ್ಶಿಗಳಾದ ದಿವ್ಯಾ ಸಂದೀಪ್, ರವೀಂದ್ರ ರೈ ಭಾಗವಹಿಸಿದರು.

RELATED NEWS

You cannot copy contents of this page