ಕಾಸರಗೋಡು: ಅಭಿಭಾಷಕ ಪರಿಷತ್ ಕುಟುಂಬ ಸಂಗಮವನ್ನು ಚಿನ್ಮಯ ಮಿಷನ್ ಬ್ರಹ್ಮಚಾರಿಣಿ ದಿಶಾ ಚೈತನ್ಯ ಉದ್ಘಾಟಿಸಿದರು. ಪರಿಷತ್ ಜಿಲ್ಲಾಧ್ಯಕ್ಷ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವೆಯಲ್ಲಿ ೫೦ ವರ್ಷ ಪೂರ್ತಿಗೊಳಿಸಿದ ನ್ಯಾಯವಾದಿ ಸಿ. ದಾಮೋದರನ್‌ರನ್ನು ಗೌರವಿಸಲಾಯಿತು.
ವಿವಿಧ ಪರೀಕ್ಷೆಗಳಲ್ಲಿ ಉನ್ನತ ಜಯಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪರಿಷತ್ ರಾಜ್ಯ ಉಪಾಧ್ಯಕ್ಷ ಬಿ. ರವೀಂದ್ರನ್, ಕಾಞಂಗಾಡ್ ಘಟಕ ಅಧ್ಯಕ್ಷ ಕೆ.ಜಿ. ಅನಿಲ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಕೆ.ಜೆ. ನವೀನ್‌ರಾಜ್ ಸ್ವಾಗತಿಸಿ, ಘಟಕ ಅಧ್ಯಕ್ಷ ಪ್ರಕಾಶ್ ರಾವ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.







