ಕುಂಬಳೆಯಲ್ಲಿ ಆಕಾಶದೆತ್ತರ ಬೆಳೆಯುತ್ತಿದೆ ಕಾಡು ಬಳ್ಳಿಗಳು :ಮೊಬೈಲ್ ಟವರ್ ಸಂಪೂರ್ಣ ಆವರಿಸಿ ಕೌತುಕ

ಕುಂಬಳೆ: ಕುಂಬಳೆ ಪೇಟೆಯ ಹೊಸ ಬಸ್ ತಂಗುದಾಣ ಕೇಂದ್ರ ಸಮೀಪದ ಮೊಬೈಲ್ ಟವರ್ ಪೊದೆ, ಬಳ್ಳಿಗಳಿಂದ ತುಂಬಿಕೊಂಡಿ ರುವುದು ಕಂಡು ಬರುತ್ತಿದೆ. ಆಕಾಶ ದೆತ್ತರಕ್ಕೆ ಬೆಳೆಯುತ್ತಿರುವ ಈ ಬಳ್ಳಿ ಕುಂಬಳೆ ಪೇಟೆಯಲ್ಲಿ ಕೌತುಕದ ನೋಟವಾಗಿದೆ. ಮಳೆಗಾಲದಲ್ಲಿ ಭಾರೀ ಬೇಗನೆ ಬೆಳೆಯುವ ಈ ಬಳ್ಳಿಗಳು ಮೊಬೈಲ್ ಟವರ್‌ನ್ನು ಸಂಪೂರ್ಣವಾಗಿ ಸುತ್ತಿಕೊಂಡಿದ್ದು, ನೋಡುಗರಿಗೆ ಹೊಸ ಅನುಭವ ನೀಡುತ್ತಿದೆ. ಆದರೆ ಇದು ಮೊಬೈಲ್ ಸೇವೆಗೆ ದೋಷಕರವಾಗಿ ಪರಿಣಮಿಸಬಹುದೇ ಎಂಬ ಆತಂಕ ಸಾರ್ವಜನಿಕರಲ್ಲಿದೆ.

ವಿವಿಧ ಭಾಗಗಳಲ್ಲಿರುವ ವಿದ್ಯುತ್ ಕಂಬಗಳು, ಸಂಪರ್ಕ ತಂತಿಗಳಲ್ಲಿ ಬಳ್ಳಿ, ಪೊದೆಗಳು ಬೆಳೆದು ದುರಂತ ಸಂಭವಿಸುವ ಭೀತಿಯಲ್ಲಿ ರುವ ಮಧ್ಯೆ ಆಕಾಶದೆತ್ತರಕ್ಕೆ ಬೆಳೆದ ಬಳ್ಳಿ ಪೊದೆಗಳು ಇಲ್ಲಿ ಕಂಡು ಬರುತ್ತಿದೆ.

ಪೊದೆ, ಬಳ್ಳಿಗಳು ತುಂಬಿ ಕೊಳ್ಳುವ ಪ್ರದೇಶ ವಿಷ ಜಂತುಗಳು, ಕಾಡು ಪ್ರಾಣಿಗಳ ಕೇಂದ್ರವಾಗಿ ಬದಲಾಗಲು ಸಾಧ್ಯತೆಯಿದೆ. ಈ ರೀತಿಯ ಬಳ್ಳಿಗಳು ತಂತಿಗಳಿಗೆ ಸುತ್ತಿಕೊಳ್ಳುವಾಗ ಅವುಗಳಿಗೂ ಹಾನಿ ಸಂಭವಿಸುವ ಸಾಧ್ಯತೆಯಿದೆ. ಅಲ್ಲದೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೂ ಕಾರಣವಾಗುತ್ತಿದೆ. ಟವರ್‌ನಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕಾರ್ಮಿಕರು ಅದರ ಮೇಲೆರಬೇಕಿದ್ದರೆ ಈ ರೀತಿಯ ಬಳ್ಳಿ ಪೊದೆಗಳು ಸಮಸ್ಯೆಯಾಗುತ್ತಿವೆ. ಆದರೆ ಈ ಭೀತಿ ಎಲ್ಲಾ ಜನಸಾಮಾನ್ಯರಲ್ಲಿ ಮಾತ್ರವಲ್ಲದೆ ಟವರ್ ಮಾಲಕರಲ್ಲಿ, ಅದನ್ನು ಸಂರಕ್ಷಿಸುವರಲ್ಲಿ ಕಂಡುಬರುತ್ತಿಲ್ಲ ಎಂಬ ಆರೋಪಿವಿದೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಪ ಯೋಗಶೂನ್ಯವಾದ, ಉಪೇಕ್ಷಿಸಲ್ಪಟ್ಟ ಹಲವಾರು ಮೊಬೈಲ್ ಟವರ್‌ಗಳಿದ್ದು, ಇದನ್ನು ತೆರವುಗೊಳಿಸದಿರುವುದು ಸಾರ್ವಜನಿಕರಿಗೆ ಬೆದರಿಕೆ ಸೃಷ್ಟಿಸುತ್ತಿದೆ. ಕಬ್ಬಿಣದ ಟವರ್‌ಗಳು ತುಕ್ಕು ಹಿಡಿದು ಜೀರ್ಣಗೊಂಡು ಗಾಳಿಗೆ, ಮಳೆಗೆ ಧರಾಶಾಹಿಯಾದರೆ ಅದು ದುರಂತಕ್ಕೆ ಕಾರಣವಾಗಬಹುದೆಂದು ಆತಂಕಪಡಲಾಗಿದೆ.

You cannot copy contents of this page