ವರ್ಕಾಡಿ: ವರ್ಕಾಡಿ ಪಾಡ ನಿವಾಸಿ ದಿ| ಕೃಷ್ಣ ಬೆಳ್ಚಪ್ಪಾಡರ ಪುತ್ರ ಅಂಚೆ ಕಚೇರಿ ಉದ್ಯೋಗಿ ಬಾಲಕೃಷ್ಣ (57) ಶನಿವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ವರ್ಕಾಡಿ ಅಂಚೆ ಕಚೇರಿಯಲ್ಲಿ 35ವರ್ಷಗಳಿಂದ ಉದ್ಯೋಗಿಯಾಗಿದ್ದು, ಕಳೆದ ಒಂದು ತಿಂಗಳಿAದ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ರಶಿಕಾ, ರುಸಾಲಿ, ಸಹೋದರ ಸಹೋದರಿಯರಾದ ವಿಠಲ, ಸೀತಾರಾಮ, ಪುರುಷೋತ್ತಮ, ಸುರೇಶ, ಸೀತಾ, ಶಾರದಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಜಿಲ್ಲಾ ಪಂ. ಸದಸ್ಯ ಹರ್ಷಾದ್ ವರ್ಕಾಡಿ, ಜನಪ್ರತಿನಿಧಿ, ಅಂಚೆ ಕಚೇರಿ ಅಧಿಕಾರಿಗಳು, ಸಿಬ್ಬಂದಿ ವರ್ಗ, ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನ ಪದಾಧಿಕಾರಿಗಳು, ಸಿಬ್ಬಂದಿ ವರ್ಗ ಸಹಿತ ಹಲವಾರು ಮಂದಿ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು.







