ಬೊಲೇರೊ ವಾಹನದಲ್ಲಿ ಸಾಗಿಸುತ್ತಿದ್ದ 1062.7 ಲೀಟರ್ ವಿದೇಶಿ ಮದ್ಯ ವಶ: ಓರ್ವ ಸೆರೆ

ಕುಂಬಳೆ: ಬೊಲೇರೊ ಪಿಕಪ್ ಇನ್ಸುಲೇಟರ್ ವಾಹನದಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ 1062.7 ಲೀಟರ್ ವಿದೇಶಿ ಮದ್ಯವನ್ನು  ಅಧಿಕಾರಿ ತಂಡ ವಶಪಡಿಸಿಕೊಂಡಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಆರಿಕ್ಕಾಡಿ ಟೋಲ್ ಪ್ಲಾಸಾ ಬಳಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ ಪ್ರಿವೆಂಟೀವ್ ಆಫೀಸರ್ ರಂಜಿತ್ ಕೆ.ವಿ.ಯವರ ನೇತೃತ್ವದ ತಂಡ ನಿನ್ನೆ ಈ ಕಾರ್ಯಾಚರಣೆ ನಡೆಸಿದೆ. ಇದಕ್ಕೆ ಸಂಬಂಧಿಸಿ ಕಾಸರಗೋಡು ತೆಕ್ಕಿಲ್ ಚಟ್ಟಂಚಾಲ್ ಪುತ್ತರಿಯಡ್ಕದ ಸಲೀಂ ಸಿ.ಎಚ್(37) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ವಶಪಡಿಸಲಾದ ಮಾಲಿನಲ್ಲಿ 180 ಎಂಎಲ್‌ನ 5904  ಬಾಟಲಿ ಮದ್ಯ ಒಳಗೊಂಡಿತ್ತೆಂದೂ, ಅದನ್ನು ೧೨೮ ಕಾರ್ಡ್‌ಬೋರ್ಡ್ ಪೆಟ್ಟಿಗೆಯೊಳಗೆ ತುಂಬಿಸಿ ಸಾಗಿಸಲಾಗುತ್ತಿತ್ತು. ಬಳಿಕ ಆ ಮಾಲು, ವಾಹನ ಮತ್ತು ಆರೋಪಿಯನ್ನು ಕುಂಬಳೆ ಅಬಕಾರಿ ರೇಂಜ್ ಕಚೇರಿಗೆ ಹಸ್ತಾಂತರಿಸಲಾಯಿತೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಗ್ರೇಡ್ ಅಸಿಸ್ಟೆಂಟ್ ಎಕ್ಸೈಸ್ ಆಫೀಸರ್ ಸಿ.ಕೆ.ವಿ ಸುರೇಶ್, ಪ್ರಿವೆಂಟಿವ್ ಆಫೀಸರ್ ಪ್ರಸಾದ್ ಎಂ.ಎಂ, ಗ್ರೇಡ್ ಪ್ರಿವೆಂಟಿವ್ ಆಫೀಸರ್ ರೀನಾ ವಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಪ್ರಶಾಂತ್ ಕುಮಾರ್, ಶೈಲೇಶ್ ಕುಮಾರ್, ಸುಧೀರ್ ಪಾರಮ್ಮಲ್, ಮೋಹನ್ ಕುಮಾರ್ ಎಲ್, ಪ್ರಿಷಿ (ಸೈಬರ್ ಸೆಲ್), ವಿಪಿನ್ ಕುಮಾರ್ ಮತ್ತು ಜಿಜಿತ್ ಎಂಬವರು ಒಳಗೊಂಡಿದ್ದರು.

RELATED NEWS

You cannot copy contents of this page