ಅನಂತಪುರದಿಂದ ಆಂಧ್ರಕ್ಕೆ ಖನಿಜ ಮಣ್ಣು ಸಾಗಾಟ: ಟೋರೆಸ್ ಲಾರಿ, ಚಾಲಕ ಕಸ್ಟಡಿಗೆ; ಇಬ್ಬರು ಟೋರೆಸ್ ಚಾಲಕರು, ಓರ್ವ ಜೆಸಿಬಿ ಚಾಲಕ ವಾಹನ ಉಪೇಕ್ಷಿಸಿ ಪರಾರಿ

ಕುಂಬಳೆ: ಅನಂತಪುರದಿಂದ ಆಂಧ್ರಕ್ಕೆ ಸಾಗಿಸಲು ಮಣ್ಣು ಹೇರಿದ್ದ ಮೂರು ಟೋರಸ್ ಲಾರಿಗಳಲ್ಲಿ ಎರಡರ ಹಾಗೂ ಎರಡು ಜೆಸಿಬಿ ಚಾಲಕರು ಪೊಲೀಸರನ್ನು ಕಂಡು ವಾಹನಗಳನ್ನು ಉಪೇಕ್ಷಿಸಿ ಪರಾರಿ ಯಾಗಿದ್ದಾರೆ. ಒಂದು ಟೋರಸ್ ಲಾರಿ ಹಾಗೂ ಚಾಲಕನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಚಾಲಕರು ಉಪೇಕ್ಷಿಸಿದ ಲಾರಿಗಳಿಗೆ ಹಾಗೂ ಜೆಸಿಬಿಗಳಿಗೆ ಪೊಲೀಸ್ ಕಾವಲು ಏರ್ಪಡಿಸಿದ್ದಾರೆ.

ಅಮೂಲ್ಯ ಖನಿಜಗಳು ಅಡಕವಾದ ಮಣ್ಣನ್ನು ಟೋರಸ್ ಲಾರಿಗಳಲ್ಲಿ ತುಂಬಿಸಿ ಅನಂತಪುರದಿಂದ ಭಾರೀ ಪ್ರಮಾಣದಲ್ಲಿ ಸಾಗಿಸಲಾಗುತ್ತಿತ್ತೆನ್ನಲಾಗಿದೆ. ಗುಡ್ಡೆ ಕೊರೆದು ಹಾಗೂ ಸಮತಟ್ಟು ಪ್ರದೇಶಗಳಿಂದ ಲೋಡ್ ಲೆಕ್ಕದಲ್ಲಿ ಮಣ್ಣನ್ನು ಪ್ರತಿ ದಿನ ಸಾಗಿಸುತ್ತಿರುವುದರ ವಿರುದ್ಧ ಸಾಮಾಜಿಕ ಕಾರ್ಯಕರ್ತ ನಾಯ್ಕಾಪು ನಿವಾಸಿ ಕೇಶವ ನಾಯಕ್ ಪೊಲೀಸರು, ಜಿಲ್ಲಾಧಿಕಾರಿ, ಜಿಯೋಲಜಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಜಿಲ್ಲಾಧಿಕಾರಿ ಈ ಬಗ್ಗೆ ಜಿಯೋಲಜಿ ಅಧಿಕಾರಿಗಳಿಗೆ ಸೂಚಿಸಿದ್ದರು. ಕೇರಳದ ಸಣ್ಣ ಹಾಗೂ ದೊಡ್ಡದಾದ ರಾಜಕೀಯ ಸಂಘಟ ಗಳು ಧಾರಾಳವಿದ್ದರೂ ಖನಿಜ ಮಣ್ಣು, ಕೆಂಪುಕಲ್ಲುಗಳನ್ನು ಸಾಗಿಸುವುದನ್ನು ಕೊನೆಗೊಳಿಸಲು ಸಾಧ್ಯವಾಗಲಿಲ್ಲವೆಂದು ಹೇಳಲಾಗುತ್ತಿದೆ. ಕೇಶವ ನಾಯಕ್ ಈ ಬಗ್ಗೆ ಸಂಸದರಿಗೂ ದೂರು ನೀಡಿದ್ದಾರೆ. ಸಂಸದರು ಅದನ್ನು ಕವರಿಂಗ್ ಲೆಟರ್ ಸಹಿತ ಮುಖ್ಯಮಂತ್ರಿಗೆ ರವಾನಿಸಿದ್ದಾರೆ. ಆದರೆ ಈ ರೀತಿಯಲ್ಲಿನ ಒಂದು ಪತ್ರ ಲಭಿಸಿಲ್ಲವೆಂದು ಮುಖ್ಯಮಂತ್ರಿಯ .ಕಚೇರಿಯಿಂದ ಕೇಶವ ನಾಯಕ್‌ರಿಗೆ ಪತ್ರ ಲಭಿಸಿದೆ. ಇಂದು ಬೆಳಿಗ್ಗೆ ಮೂರು ಟೋರಸ್ ಲಾರಿಗಳಲ್ಲಿ ಎರಡು ಜೆಸಿಬಿಗಳನ್ನು ಉಪಯೋಗಿಸಿ ಮಣ್ಣು ಸಂಗ್ರಹಿಸುತ್ತಿರುವುದು ಗಮನಕ್ಕೆ ಬಂದ ದೂರುದಾರ ಕಾಸರಗೋಡಿನಲ್ಲಿ ದೂರು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲವೆಂದು ತಿಳಿದುಕೊಂಡು ರಾಜ್ಯ ಪೊಲೀಸ್ ಕೇಂದ್ರದ 112 ನಂಬ್ರಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಅವರು ಆವಾಗಲೇ ಜಿಲ್ಲಾ ಪೊಲೀಸ್ ಕೇಂದ್ರಕ್ಕೆ ಕರೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ಕೇಂದ್ರದಿಂದ ಕುಂಬಳೆ ಪೊಲೀಸರಿಗೆ ಕರೆ ಹೋಯಿತು. ಕುಂಬಳೆ ಎಸ್‌ಐ ವಿಶಾಖ್ ಹಾಗೂ ತಂಡ ಅನಂತಪುರಕ್ಕೆ ತಲುಪಿದ ಕೂಡಲೇ ಎರಡು ಲಾರಿಗಳ ಚಾಲಕರು, ಎರಡು ಜೆಸಿಬಿ ಚಾಲಕರು ವಾಹನಗಳಿಂದ ಬೀಗದ ಕೀಲಿಯನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಉಳಿದ ಒಂದು ಟೋರಸ್ ಲಾರಿಯ ಹಾಗೂ ಅದರ ಚಾಲಕ ಆಂಧ್ರ ಪ್ರದೇಶ ನಿವಾಸಿ ವಿಠಲ ಶಿವಕೋಡಿಯನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಚಾಲಕನನ್ನು ಹಾಗೂ ಲಾರಿಯನ್ನು ಜಿಯೋಲಜಿಗೆ ಹಸ್ತಾಂತರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page