ರೈಲು ನಿಲ್ದಾಣದ ನೌಕರೆ ವಿರುದ್ಧ ಲೈಂಗಿಕ ಕಿರುಕುಳ: ಪಾರ್ಸೆಲ್ ಕಚೇರಿ ಕಾರ್ಮಿಕ ಸೆರೆ

ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣದ ನೌಕರೆ ಯುವತಿ ವಿರುದ್ಧ ಲೈಂಗಿಕ  ಕಿರುಕುಳ ನೀಡಿದ ತಲೆಹೊರೆ ಕಾರ್ಮಿಕ ಸೆರೆಯಾ ಗಿದ್ದಾನೆ. ರೈಲು ನಿಲ್ದಾಣದ ಪಾರ್ಸೆಲ್ ಕಚೇರಿ ತಲೆಹೊರೆ ಕಾರ್ಮಿಕ ಹಾಗೂ ಪೆರಿಯಾ ರಾರಪ್ಪನಡ್ಕ ಚೆರುಕ್ಕಪ್ಪಾರ ನಿವಾಸಿ ಕೆ. ಇಸ್ಮಾಯಿಲ್ (47) ಸೆರೆಯಾದ ವ್ಯಕ್ತಿ. ನಿನ್ನೆ ಘಟನೆ ನಡೆದಿದೆ. ಡೋರ್ ಮೆಟರಿಯಲ್ಲಿ ರಿಸಪ್ಶನಿಸ್ಟ್ ಆಗಿ ಕರ್ತವ್ಯದಲ್ಲಿದ್ದ ಯುವತಿಯ ಕೊಠಡಿಗೆ ಅಕ್ರಮವಾಗಿ ನುಗ್ಗಿ ಆರೋಪಿ ಯುವತಿಯನ್ನು ಹಾಸಿಗೆಗೆ ದೂಡಿ ಹಾಕಿದ್ದಾನೆನ್ನಲಾಗಿದೆ. ಯುವತಿಯ ದೇಹವನ್ನು ಸ್ಪರ್ಶಿಸಿದ ಆರೋಪಿ ಲೈಂಗಿಕ ಸಂಪರ್ಕಕ್ಕೆ ಒತ್ತಾ ಯಿಸಿದ್ದಾನೆನ್ನಲಾಗಿದೆ. ಕೊಠಡಿಯಿಂದ ಪಾರಾದ ಯುವತಿ ಇತರರಲ್ಲಿ ಮಾಹಿತಿ ತಿಳಿಸಿದ್ದು, ಬಳಿಕ ರೈಲ್ವೇ ನಿಲ್ದಾಣದ ಪೊಲೀ ಸರಿಗೆ ದೂರು ನೀಡಿದ್ದಾರೆ. ಎಸ್‌ಎಚ್ ಒ.ಕೆ. ರಾಜೀವರ್ ನೇತೃತ್ವದಲ್ಲಿ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಕಾಞಂಗಾಡ್ ಫಸ್ಟ್‌ಕ್ಲಾಸ್ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

You cannot copy contents of this page