ಉಪ್ಪಳ: ವ್ಯಕ್ತಿಯೊಬ್ಬರು ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕಡಂಬಾರು ಚಾತಿಪಡ್ಪು ನಿವಾಸಿ ಇಬ್ರಾಹಿಂ (6೦) ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ. ಈ ಬಗ್ಗೆ ಇವರ ಪುತ್ರ ಮೊಯ್ದೀನ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ತಿಂಗಳ 17ರಂದು ಬೆಳಿಗ್ಗೆ ಕಡಂಬಾರು ಮಸೀದಿ ಬಳಿಯಿರುವ ಬೀಡಿ ಬ್ರಾಂಚ್‌ಗೆ ಇಬ್ರಾಹಿಂ ಬೀಡಿ ಸಹಿತ ತೆರಳಿದ್ದರು. ಅನಂತರ ಮರಳಿ ಮನೆಗೆ ಬಂದಿಲ್ಲ. ಇದರಿಂದ ವಿವಿಧೆಡೆ ಹುಡುಕಾಡಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲವೆಂದು ಪುತ್ರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.







