ವಾಹನ ಅಪಘಾತ: ಅಮಾನತು ಸುದ್ದಿ ತಿಳಿದು ಎಎಸ್‌ಐಯ ತಾಯಿ ಕುಸಿದುಬಿದ್ದು ಮೃತ್ಯು

ಕೊಚ್ಚಿ: ಚೇರಾನಲ್ಲೂರು ಎಂಬಲ್ಲಿ ಇತ್ತೀಚೆಗೆ ಸಂಭವಿಸಿದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಎಎಸ್‌ಐಯನ್ನು ಅಮಾನತು ಗೊಳಿಸಿದ ವಿಷಯ ತಿಳಿದು  ಬೇಸರ ಗೊಂಡಿದ್ದ ತಾಯಿ ಕುಸಿದುಬಿದ್ದು ಮೃತಪಟ್ಟರು. ಚೇರಾನಲ್ಲೂರು ಠಾಣೆಯ ಎಎಸ್‌ಐ ಕೆ.ಟಿ. ಮನೋಜ್‌ರ ತಾಯಿ ಪಾತಾಳಂ ಕುರಿಕ್ಕಾಟ್‌ಪರಂಬಿಲ್‌ನ ಎನ್.ಕೆ. ಸರಸು (71) ಎಂಬವರು ಮೃತಪಟ್ಟವರಾಗಿದ್ದಾರೆ. 

೧೭ರ ಹರೆಯದ ಬಾಲಕ ಚಲಾಯಿಸಿದ ಕಾರು ಢಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟ ಪ್ರಕರಣದ ತನಿಖೆ ಯಲ್ಲಿ ನಿರ್ಲಕ್ಷ್ಯ ವಹಿಸಲಾ ಗಿದೆಯೆಂ ದು ಆರೋಪಿಸಿ ಮನೋಜ್ ಸಹಿತ ನಾಲ್ಕು ಮಂದಿಯನ್ನು ಅಮಾನತು ಗೊಳಿಸಲಾಗಿತ್ತು.  ಪುತ್ರನನ್ನು ಅಮಾನತುಗೊಳಿಸಿದ ವಿಷಯ ತಿಳಿದ ಸರಸು  ಬೇಸರದಿಂದಿಂದು ಸಂಬಂಧಿಕರು ತಿಳಿಸಿದ್ದಾರೆ. ಹೃದಯ ಸಂಬಂಧ ಅಸೌಖ್ಯ ಬಾಧಿಸಿದ್ದ ಸರಸು ಚಿಕಿತ್ಸೆಯಲ್ಲಿದ್ದರು. ಮನೋಜ್‌ರೊಂದಿಗೆ ವಾಸಿಸುತ್ತಿದ್ದ ಸರಸು  ಕೆಲವು ದಿನಗಳಿಂದ  ಪುತ್ರಿ ಮಂಜು ಅವರ ಪಾತಾಳ ಎಂಬಲ್ಲಿನ ಮನೆಯಲ್ಲಿದ್ದರು.  ದಿ| ತೇವನ್ ಎಂಬವರ ಪತ್ನಿಯಾದ ಸರಸು   ಇನ್ನೋರ್ವೆ ಪುತ್ರಿ ಸುಮ ಮೊದಲಾದವರನ್ನು ಅಗಲಿದ್ದಾರೆ.

You cannot copy contents of this page