ಶಾಲೆಗೆ ಹೋದ ವಿದ್ಯಾರ್ಥಿ, ವಿದ್ಯಾರ್ಥಿನಿ ನಾಪತ್ತೆ

ಕಾಸರಗೋಡು: ಶಾಲೆಗೆ ಹೋದ 16ರ ಹರೆಯದ ಪ್ಲಸ್‌ವನ್ ವಿದ್ಯಾರ್ಥಿನಿ ಹಾಗೂ 17ರ ಹರೆಯದ ಪ್ಲಸ್‌ಟು ವಿದ್ಯಾರ್ಥಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಇವರು ಬೇಕಲ ಪೊಲೀಸ್ ಸಬ್ ಡಿವಿಶನ್ ವ್ಯಾಪ್ತಿಯ ಸರಕಾರಿ ಶಾಲೆ ಯೊಂದರ  ವಿದ್ಯಾರ್ಥಿಗಳಾಗಿದ್ದಾರೆ. ಎಂದಿನಂತೆ ನಿನ್ನೆಯೂ ಇವರು ಶಾಲೆಗೆ ತೆರಳಿದ್ದರು. ಮಧ್ಯಾಹ್ನವರೆಗೆ ಇವರು ತರಗತಿಯಲ್ಲಿದ್ದರು. ಮಧ್ಯಾಹ್ನ ಬಳಿಕ ತರಗತಿಯಲ್ಲಿ ಕಾಣದ ಹಿನ್ನೆಲೆಯಲ್ಲಿ ಶಾಲಾ ಅಧಿಕಾರಿಗಳು ವಿದ್ಯಾರ್ಥಿಗಳ ರಕ್ಷಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು.  ಲಿಖಿತವಾಗಿ ದೂರು ಲಭಿಸದಿದ್ದರೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.  ನಾಪತ್ತೆಯಾದ ವಿದ್ಯಾರ್ಥಿಗಳು ಕರ್ನಾಟಕದ  ಆರಾಧನಾಲಯೊಂ ದರಲ್ಲಿದ್ದಾರೆಂದು ಪೊಲೀಸರಿಗೆ ಮಾಹಿ ತಿ ಲಭಿಸಿರುವುದಾಗಿ ಹೇಳಲಾಗುತ್ತಿದೆ.

You cannot copy contents of this page