ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಯುವಕ ಸಾವು
ಬದಿಯಡ್ಕ: ವಿಷ ಸೇವಿಸಿದ ಸ್ಥಿತಿಯಲ್ಲಿ ಕಂಡು ಬಂದ ಯುವಕ ಚಿಕಿತ್ಸೆ ಮಧ್ಯೆ ಮೃತಪಟ್ಟ ಘಟನೆ ನಡೆದಿದೆ. ಕುಂಬ್ಡಾಜೆ ನಿವಾಸಿ ಹೈದರ್ ಎಂಬವರ ಪುತ್ರ ಮುಹಮ್ಮದ್ ಸುಹೈಲ್ (೨೦) ಮೃತಪಟ್ಟಯುವಕ. ಕಳೆದ ಸೋಮವಾರ ವಿಷ ಸೇವಿಸಿದ ಸ್ಥಿತಿಯಲ್ಲಿ ಕಂಡು ಬಂದ ಮುಹಮ್ಮದ್ ಸುಹೈಲ್ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಅವರು ಮೃತಪಟ್ಟರು. ಮೃತರು ತಂದೆ, ತಾಯಿ ಸುಲೈಖ, ಸಹೋದರ ಸಿದ್ದಿಕ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.