ನೀರ್ಚಾಲು: ಇಲ್ಲಿಗೆ ಸಮೀಪದ ಚುಕ್ಕಿನಡ್ಕ ನಿವಾಸಿ ಕಂಬಾರು ಸುಬ್ರಹ್ಮಣ್ಯ ಭಟ್ (83) ನಿನ್ನೆ ನಿಧನ ಹೊಂದಿದರು. ಹಿರಿಯ ಯಕ್ಷಗಾನ ಕಲಾವಿದರಾಗಿ ದ್ದರು. ಮೃತರು ಪತ್ನಿ ಸುಮತಿ, ಮಕ್ಕಳಾದ ಉದಯ ಕಂಬಾರು (ಸ್ಟುಡಿಯೋ ನೀರ್ಚಾಲು), ಶ್ರೀಪತಿ ಕಂಬಾರು (ಬಟ್ಟೆಬರೆ ವ್ಯಾಪಾರಿ ನೀರ್ಚಾಲು), ಸುರೇಶ ಕಂಬಾರು, ಸೊಸೆಯಂದಿರಾದ ಮಧುಮತಿ, ಭಾಗ್ಯಲಕ್ಷ್ಮಿ, ಗೀತಾ ಲಕ್ಷ್ಮಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.







