ಕಾಸರಗೋಡು: ಮುಖ್ಯಮಂತ್ರಿ ವಿ.ಡಿ ಸತೀಶನ್ ನಾಳೆ ಕಾಸರಗೋ ಡಿಗೆ ಆಗಮಿಸಲಿದ್ದಾರೆ. ನಾಳೆ ಬೆಳಿಗ್ಗೆ ಕಾಸರಗೋಡಿಗೆ ತಲುಪುವ ಅವರು 8.30ಕ್ಕೆ ಎಡನೀರು ಮಠಕ್ಕೆ ಭೇಟಿ ನೀಡುವರು. 9 ಗಂಟೆಗೆ ಕಾಂಗ್ರೆಸ್ ಜಿಲ್ಲಾ ಸಮಿತಿ ಕಚೇರಿಗೆ ಸಂದರ್ಶಿಸುವರು. ಈ ವೇಳೆ ಅವರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿ ಯಿಂದ ಅಭಿನಂದಿಸಲಾಗುವುದು. 9.30ಕ್ಕೆ ಚೆಟ್ಟುಂಗುಳಿ ರೋಯಲ್ ಕನ್ವೆನ್ಶನ್ ಹಾಲ್‌ನಲ್ಲಿ ಯುಡಿ ಎಫ್‌ನ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯನ್ನು ಗೌರವಿಸಿ ಅಭಿನಂದಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಸಚಿವರುಗಳಾದ ಎಂ. ಲಿಜು, ಕೆ.ಎಂ. ಶಾಜಿ, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರುಗಳಾದ ಕಲ್ಲಟ್ರ ಮಾಹಿನ್, ಎಕೆಎಂ ಅಶ್ರಫ್, ಕೆ. ನೀಲಕಂಠನ್, ಸಂದೀಪ್ ವಾರ್ಯರ್, ಸೇರಿದಂತೆ ಯುಡಿಎಫ್‌ನ ಹಲವು ನೇತಾರರು ಭಾಗವಹಿಸುವರು. ಅನಂತರ ಮುಖ್ಯಮಂತ್ರಿ ಹೊಸದುರ್ಗಕ್ಕೆ ತೆರಳಲಿದ್ದು ಅಲ್ಲಿ ನಡೆಯುವ ಸಹಕಾರಿ ವಾರಾಚರಣೆಯ ರಾಜ್ಯ ಮಟ್ಟದ ಸಮಾರೋಪ ಸಭೆಯನ್ನು ಉದ್ಘಾಟಿಸುವರು. ಮುಖ್ಯ ಮಂತ್ರಿಯಾದ ಬಳಿಕ ಮೊದಲ ಬಾರಿಗೆ ವಿ.ಡಿ. ಸತೀಶನ್ ಕಾಸರಗೋ ಡಿಗೆ ಆಗಮಿ ಸುವುದ ರಿಂದ ಅವರು ಭಾಗವಹಿಸುವ ಕಾರ್ಯಕ್ರಮ ಗಳನ್ನು ಅತ್ಯಂತ ಅದ್ದೂರಿಯಾಗಿ ನಡೆಸಲು ಯುಡಿ ಎಫ್ ಜಿಲ್ಲಾ ಸಮಿತಿ ತೀರ್ಮಾನಿಸಿದೆ.





