ಮೂನಾರ್‌ಗೆ ಕೆಲಸಕ್ಕೆ ಹೋದ ಯುವಕ ನಾಪತ್ತೆ

ಕಾಸರಗೋಡು: ಮೂನಾರ್‌ಗೆ ಕೆಲಸಕ್ಕೆಂದು ತಿಳಿಸಿ ಮನೆಯಿಂದ ಹೋದ ಯುವಕ ನಾಪತ್ತೆಯಾಗಿ ರುವುದಾಗಿ ದೂರಲಾಗಿದೆ. ಪನಯಾಲ್ ಪೆರಿಯಾಟಡ್ಕದ ರಾಮದಾಸ್‌ರ ಪುತ್ರ ಕೆ.ವಿ. ಉಮೇಶ್ (36) ನಾಪತ್ತೆಯಾದ ಯುವಕನಾಗಿದ್ದಾನೆ. ಈ ಬಗ್ಗೆ ಪತ್ನಿ ನೀಡಿದ ದೂರಿನಂತೆ ಬೇಕಲ ಪೊಲೀ ಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 2026 ಫೆಬ್ರವರಿ 6ರಂದು ಮೂನಾರ್‌ಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋದ ಉಮೇಶ್ ಬಳಿಕ ಮರಳಿ ಬಂದಿಲ್ಲ. ಅಲ್ಲದೆ ಅವರ ಕುರಿತಾಗಿ ಯಾವುದೇ ಮಾಹಿತಿ ಇಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ವೇಳೆ ಉಮೇಶ್‌ರ ಫೋನ್‌ಗೆ ಕರೆ ಮಾಡಿದಾಗ ರಿಂಗಣಿಸುತ್ತಿದ್ದರೂ ಕರೆಯನ್ನು ಸ್ವೀಕರಿಸುತ್ತಿಲ್ಲವೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿಯಲಾಗಿದೆ. ಹೆಚ್ಚಿನ ತನಿಖೆಗಾಗಿ ಪೊಲೀಸರು ಶೀಘ್ರ ಮೂನಾರ್‌ಗೆ ತೆರಳಲಿದ್ದಾರೆ.

RELATED NEWS

You cannot copy contents of this page