ಎಎಡಬ್ಲ್ಯುಕೆ ಕಾಸರಗೋಡು ಯೂನಿಟ್ ಸಮ್ಮೇಳನ, ಕುಟುಂಬ ಸಂಗಮ

ಕಾಸರಗೋಡು: ಅಸೋಸಿಯೇ ಶನ್ ಆಫ್ ಆಟೋಮೊಬೈಲ್ ವರ್ಕ್‌ಶಾಪ್ಸ್ ಕೇರಳ (ಎಎಡಬ್ಲ್ಯುಕೆ) ಕಾಸರಗೋಡು ಘಟಕ ಸಮ್ಮೇಳನ ಹಾಗೂ ಕುಟುಂಬ ಸಂಗಮ ನಡೆಸಲಾಯಿತು. ಪಿಲಿಕುಂಜೆ ಭಗವತಿ ಸಭಾ ಭವನದಲ್ಲಿ ನಡೆದ ಕಾರ್ಯ ಕ್ರಮವನ್ನು ಅಸೋಸಿಯೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸೀರ್ ಕಲ್ಲಿಕೋಡ್ ಉದ್ಘಾಟಿಸಿದರು. ಘಟಕ ಅಧ್ಯಕ್ಷ ಎಸ್.ಕೆ. ಪ್ರಕಾಶ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಕೋಶಾಧಿಕಾರಿ ಸುಧೀರ್ ಮೆನೋನ್, ರತೀಶ್ ಕುಂಡಡ್ಕ, ರಾಜ್ಯ ಜೊತೆ ಕಾರ್ಯದರ್ಶಿ ಕೆ. ಸುರೇಶ್ ಕುಮಾರ್, ಮುಖಂಡದರಾದ ಗುಣೇಂದ್ರಲಾಲ್ ಸುನಿಲ್, ದೇವಿದಾಸ್, ಮನು ವಿನಾಯಕ, ಪ್ರಕಾಶನ್, ಜೋಷಿ ಥೋಮಸ್, ಅರವಿಂದನ್, ಸಿರಿಯಕ್ ಮ್ಯಾಥ್ಯು, ಜಯರಾಜ್, ಪಿ. ವಿ. ರತೀಶ್, ಎ.ಕೆ. ರತೀಶ್ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ಕ್ರಿಕೆಟ್ ವಿಜೇತರಿಗಿರುವ ಟ್ರೋಪಿ ವಿತರಣೆ ನಡೆಸಲಾಯಿತು. ಬಳಿಕ ಸಂಘಟನೆಯ ಕುಟುಂಬ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳು ಜರಗಿತು. ಘಟಕ ಜೊತೆ ಕಾರ್ಯದರ್ಶಿ ಗಲೇಶ್ ಸ್ವಾಗತಿಸಿ, ಘಟಕ ಕೋಶಾಧಿಕಾರಿ ಮೋಹನ್ ಕುಮಾರ್ ವಂದಿಸಿದರು

You cannot copy contents of this page