ಚಪ್ಪಲಿ ಮತ್ತು ಬೂಟು ಎತ್ತಿ ತೋರಿಸಿದ ಪ್ರದರ್ಶನ ಸಂಸ್ಕೃತಿಹೀನ ಮತ್ತು ರಾಜಕೀಯ ದಿವಾಳಿತನದ ಸಂಕೇತ- ಕೆ. ಶ್ರೀಕಾಂತ್
ಕಾಸರಗೋಡು: ಕೇರಳ ಕೇಂದ್ರ ವಿಶ್ವವಿದ್ಯಾಲಯದಲ್ಲಿ ವಂದೇ ಮಾತರಂ 150ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಭಾಗವಹಿಸಲು ಆಗಮಿ ಸಿದ್ದ ಅತಿಥಿಗಳ ವಿರುದ್ಧ ಕೆಲವು ವಿದ್ಯಾರ್ಥಿಗಳು ಚಪ್ಪಲಿ ಮತ್ತು ಬೂಟು ಗಳನ್ನು ಎತ್ತಿ ತೋರಿಸಿ ಘೋಷಣೆ ಕೂಗಿದ ಘಟನೆ ಸಂಸ್ಕೃತಿಹೀನ ಪ್ರತಿಭ ಟನೆಯ ಅತ್ಯಂತ ಕೆಳಮಟ್ಟದ ರೂಪ ಹಾಗೂ ರಾಜಕೀಯ ದಿವಾಳಿತನದ ಬಹಿರಂಗ ಪ್ರದರ್ಶನವಾಗಿದೆ ಎಂದು ಬಿಜೆಪಿ ಕಣ್ಣೂರು ವಲಯ ಅಧ್ಯಕ್ಷ ಅಡ್ವ. ಕೆ. ಶ್ರೀಕಾಂತ್ ಹೇಳಿದರು.ತಮಗೆ ಇಷ್ಟವಿಲ್ಲದ ವಿಚಾರಧಾರೆ ಯವರು ಒಂದು ವಿಚಾರಗೋಷ್ಠಿಯಲ್ಲಿ ಭಾಗವಹಿಸುವುದನ್ನೂ ಸಹಿಸಿಕೊಳ್ಳ ಲಾಗದ …