ಕುಸಿದುಬಿದ್ದು ಮೃತ್ಯು

ಕಾಸರಗೋಡು: ಮೊಗ್ರಾಲ್ ಪುತ್ತೂರು ಮಜಲ್ ನಿವಾಸಿ ಎ. ಸಂಜೀವ(64) ನಿಧನಹೊಂದಿದರು. ಇಂದು ಬೆಳಿಗ್ಗೆ ಬಾತ್‌ರೂಂನಲ್ಲಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದ್ದರೂ ಅಷ್ಟರೊಳಗೆ ನಿಧನ ಸಂಭವಿಸಿತ್ತು. ಇವರು ಸಿಪಿಸಿಆರ್‌ಐಯಲ್ಲಿ ನೌಕರನಾಗಿ ಸೇವೆ ಸಲ್ಲಿಸಿದ್ದರು. ಕುಂಟ್ಯಾನ-ಕುಂಭ ದಂಪತಿ ಪುತ್ರನಾದ  ಮೃತರು ಪತ್ನಿ ಉಷ, ಪುತ್ರಸುಜನ್‌ಪಾಲ್, ಸೊಸೆ ಶಾಲಿನಿ, ಸಹೋದರ ರಾಮಚಂದ್ರ, ಸಹೋದರಿ ನಿರ್ಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋದರರಾದ ನಾರಾಯಣ, ಶಂಕರ, ರಾಮ ಎಂಬವರುಈ ಹಿಂದೆ ನಿಧನರಾಗಿದ್ದಾರೆ.

ಸಿಪಿಎಂ, ಸಿಐಟಿಯು ನೇತಾರ ಕೆ. ಭಾಸ್ಕರನ್ ನಿಧನ

ಕಾಸರಗೋಡು: ಸಿಪಿಎಂ, ಸಿಐಟಿಯು ನೇತಾರನಾಗಿದ್ದ ನುಳ್ಳಿಪ್ಪಾಡಿ ಚೆನ್ನಿಕರೆ ದಿನೇಶ್ ಕೃಷ್ಣ ಭವನದ ಕೆ. ಭಾಸ್ಕರನ್ (72) ನಿಧನಹೊಂದಿದರು. ಅಸೌಖ್ಯ ಬಾಧಿಸಿದ್ದ ಇವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಬೇಡಗ ಕೊಳತ್ತೂರು ಕಾಣಿಯಡ್ಕದ ದಿ| ಕೊರಗನ್-ಕುಂಞಮ್ಮಾರಮ್ಮ ದಂಪತಿಯ ಪುತ್ರನಾದ ಭಾಸ್ಕರನ್ ಬೀಡಿ ಕಾರ್ಮಿಕನಾಗಿ ರಾಜಕೀಯ ರಂಗಕ್ಕೆ ತಲುಪಿದ್ದರು. ಸಿಪಿಎಂ ಏರಿಯಾ ಕಮಿಟಿ ಸದಸ್ಯ, ಲೋಕಲ್ ಸೆಕ್ರೆಟರಿ, ಸಿಐಟಿಯು ಏರಿಯಾ ಸೆಕ್ರೆಟರಿ, ಜಿಲ್ಲಾ  ಕಾರ್ಯದರ್ಶಿ ಉಪಾಧ್ಯಕ್ಷ, ಬೀಡಿ ಕಾರ್ಮಿಕ ಯೂನಿಯನ್ ತಾಲೂಕು ಸೆಕ್ರೆಟರಿ, ರಾಜ್ಯಸಮಿತಿ ಸದಸ್ಯ, …

ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಕಾರ್ನವರ್ ನಿಧನ

ಉಪ್ಪಳ: ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಕಾರ್ನವರ್ ರಮೇಶ (ರಾಮಪ್ಪ) (38) ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ಮಧ್ಯಾಹ್ನ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರು ಕಳೆದ ಐದು ವರ್ಷಗಳಿಂದ ಶ್ರೀ ಕ್ಷೇತ್ರದಲ್ಲಿ ಕಾರ್ನವರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮೂಲತ: ಮಂಗಲ್ಪಾಡಿ ಪ್ರತಾಪನಗರ ನಿವಾಸಿಯಾಗಿದ್ದು, ಮುಳಿಂಜ ಭಂಡಾರ ತರವಾಡು ಮನೆಯಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಕೃಪಾ, ಪುತ್ರಿ ಮನಸ್ವಿ, ಸಹೋದರ ಗಣೇಶ, ಸಹೋದರಿ ರಮ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಪ್ರತಾಪನಗರದ …

ಜಿಲ್ಲೆಯಲ್ಲಿ ಸುರಕ್ಷಾ ಪ್ರಮಾಣಪತ್ರಗಳಿಲ್ಲದೆ 76  ಶಾಲೆಗಳು ಕಾರ್ಯಾಚರಣೆ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 76 ಶಾಲೆಗಳು ಸುರಕ್ಷಾ ಪ್ರಮಾಣಪತ್ರಗಳಿಲ್ಲದೆ ಕಾರ್ಯಾಚರಿಸುತ್ತಿದೆಯೆಂದು ತಿಳಿದುಬಂದಿದೆ. ಇದರಲ್ಲಿ 69 ಸರಕಾರಿ ಶಾಲೆಗಳಾಗಿವೆ. 4 ಐಡೆಡ್, 3 ಅನ್‌ಐಡೆಡ್ ಶಾಲೆಗಳಾಗಿವೆ. ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಜಾಗ್ರತೆ ವಹಿಸಲಾಗುತ್ತಿದೆಯೆಂದು ಅಧಿಕಾರಿಗಳು ತಿಳಿಸುತ್ತಿರುವಾಗಲೇ ಇಷ್ಟೊಂದು ಸಂಖ್ಯೆಯಲ್ಲಿ ಶಾಲೆಗಳು ಜಿಲ್ಲೆಯಲ್ಲಿ ಸುರಕ್ಷತೆಯಿಲ್ಲದೆ ಕಾರ್ಯಾಚರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ಈ ಶಾಲೆಗಳನ್ನು ತೆರವುಗೊಳಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಕೆಲವೆಡೆ ಜೀರ್ಣಿಸಿದ ಕಟ್ಟಡಗಳ ಸಮೀಪ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆದ್ದರಿಂದ ಹೊಸ ಕಟ್ಟಡಗಳಿಗೂ ಸುರಕ್ಷಾ ಪ್ರಮಾಣಪತ್ರ ಲಭಿಸಿಲ್ಲವೆಂದು ತಿಳಿದುಬಂದಿದೆ. ಶಾಲೆಗಳು ಜೂನ್‌ನಲ್ಲಿ …

ಮಗಳ ಮನೆಯಲ್ಲಿ ತಾಯಿ ಕುಸಿದು ಬಿದ್ದು ಮೃತ್ಯು

ಕುಂಬಳೆ: ಕೊಯಿಪ್ಪಾಡಿಯಲ್ಲಿ ರುವ ಮಗಳ ಮನೆಗೆ ಬಂದಿದ್ದ ತಾಯಿ ಕುಸಿದು ಬಿದ್ದ್ದು ಮೃತಪಟ್ಟ ಘಟನೆ ನಡೆದಿದೆ. ಪಳಯಂಗಾಡಿ ನಿವಾಸಿ ಬಾಲಕೃಷ್ಣನ್ ಎಂಬವರ ಪತ್ನಿ ಶಾಂತ (68) ಮೃತಪಟ್ಟವರು. ನಿನ್ನೆ ಬೆಳಿಗ್ಗೆ  ಕೊಯಿಪ್ಪಾಡಿಯಲ್ಲಿರುವ  ಮಗಳು ಬಬಿತರ ಮನೆಯಲ್ಲಿ ಶಾಂತ ಕುಸಿದುಬಿದ್ದಿದ್ದರು. ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರೊಳಗೆ ನಿಧನ ಸಂಭವಿಸಿತ್ತು.  ಮೃತರು ಇತರ ಮಕ್ಕಳಾದ  ಮನೋಜ್, ಮಹೇಶ್, ಮಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ದೇಶದಾದ್ಯಂತ 27ರಂದು ಬ್ಯಾಂಕ್ ಮುಷ್ಕರ

ದೆಹಲಿ: ಈ ತಿಂಗಳ 27ರಂದು ಬ್ಯಾಂಕ್ ನೌಕರರು ದೇಶವ್ಯಾಪಕ ಕೆಲಸ ಸ್ಥಗಿತ ಮುಷ್ಕರಕ್ಕೆ ಆಹ್ವಾನ ನೀಡಿದ್ದಾರೆ. ಬ್ಯಾಂಕ್‌ಗಳ ಚಟುವಟಿಕೆ ದಿನವನ್ನು ವಾರದಲ್ಲಿ 5ಆಗಿ ನಿಗದಿ ಪಡಿಸಬೇಕು ಎಂದು ಆಗ್ರಹಿಸಿ ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ಸ್ ಕೆಲಸ ಸ್ಥಗಿತ ಮುಷ್ಕರಕ್ಕೆ ಆಹ್ವಾನ ನೀಡಿರುವುದು. ಬ್ಯಾಂಕ್ ನೌಕರರ ದೇಶದ ೯ನೇ ಯೂನಿಯನ್‌ಗಳ ಜಂಟಿ ಸಂಘಟನೆ ಕೆಲಸ ಸ್ಥಗಿತ ಮುಷ್ಕರಕ್ಕೆ ಆಹ್ವಾನ ನೀಡಿರುವುದು. 2023ರಲ್ಲಿ ಈ ಬಗ್ಗೆ ಬ್ಯಾಂಕ್ ಮೆನೇಜ್‌ಮೆಂಟ್ ತೀರ್ಮಾನಿಸಿತ್ತಾದರೂ ಕ್ರಮ ಉಂಟಾಗದೆ ಇರುವುದನ್ನು ಪ್ರತಿಭಟಿಸಿ ಕೆಲಸ ಸ್ಥಗಿತ …

ಸಾಕ್ಷ್ಯಬದಲಿಸಿದ ಪ್ರಕರಣ : ಕೇರಳದ ಶಾಸಕರು ಅನರ್ಹಗೊಳ್ಳುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಇದು ಪ್ರಥಮ

ತಿರುವನಂತಪುರ: ಮಾದಕದ್ರವ್ಯ ಪ್ರಕರಣದ ಆರೋಪಿಯಾಗಿರುವ ವಿದೇಶಿ ಪ್ರಜೆಯನ್ನು ಶಿಕ್ಷೆಯಿಂದ ರಕ್ಷಿಸಲು ಸಾಕ್ಷ್ಯ ಬದಲಿಸಿದ ಪ್ರಕರಣದಲ್ಲಿ ತಿರುವನಂತಪುರ ಶಾಸಕರು ಹಾಗೂ ಮಾಜಿ ಸಾರಿಗೆ ಸಚಿವರೂ ಆಗಿರುವ  ಆಂಟನಿ ರಾಜು ಶಿಕ್ಷೆಗೊಳಗಾಗಿ ಅದರಿಂದಾಗಿ ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಂಡಿ ದ್ದು, ಹೀಗೆ ಶಾಸಕರೋರ್ವರು ಶಿಕ್ಷೆಗೊಳಗಾಗಿ ಆ ಸ್ಥಾನದಿಂದ ಅನರ್ಹಗೊಂಡಿರುವುದು ಕೇರಳದ  ರಾಜಕೀಯ ಇತಿಹಾಸದಲ್ಲೇ ಇದು ಪ್ರಥಮವಾಗಿದೆ. 1990 ಎಪ್ರಿಲ್ 4ರಂದು ಆಸ್ಟ್ರೇಲಿಯ ಪ್ರಜೆಯಾಗಿರುವ ಆಂಡ್ರೂ ಸಾಲ್ವಡಾರ್ ಎಂಬಾತನನ್ನು  ಮಾದಕದ್ರವ್ಯವಾದ 61 ಗ್ರಾಂ ಹ್ಯಾಶಿಶ್ ಆಯಿಲ್‌ನೊಂದಿಗೆ ತಿರುವನಂತಪುರ ವಿಮಾನ ನಿಲ್ದಾಣದಿಂದ ವಲಿಯತ್ತೂರು …

ಪೆರಡಾಲ ವಾರ್ಡ್ ಬಿಜೆಪಿ ಕಾರ್ಯಕರ್ತರ ಸಮಾವೇಶ

ಬದಿಯಡ್ಕ: ಪಂಚಾಯತ್‌ನ 13ನೇ ವಾರ್ಡ್ ಬಿಜೆಪಿ ಕಾರ್ಯಕರ್ತರ ಸಮಾವೇಶ ಬೀಜಂತಡ್ಕ ಪರಿಸರದಲ್ಲಿ ಜರಗಿತು. ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಅಧ್ಯಕ್ಷ ಡಿ. ಶಂಕರ ಉದ್ಘಾಟಿಸಿದರು. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಬ್ಲೋಕ್ ಪಂ. ಸದಸ್ಯ ಮಹೇಶ್ ವಳಕುಂಜ, ಜಯರಾಮ್ ಚೆಟ್ಟಿಯಾರ್, ವಾರ್ಡ್ ಸಮಿತಿ ಅಧ್ಯಕ್ಷ ನಾರಾಯಣ, ಜಿಲ್ಲಾ ಪಂಚಾಯತ್ ಸದಸ್ಯ ರಾಮಪ್ಪ ಮಂಜೇಶ್ವರ, ಪಂ. ಸದಸ್ಯರಾದ ಶ್ಯಾಮ್ ಪ್ರಸಾದ್ ಸರಳಿ, ಮಧುಸೂದನ್, ಅವಿನಾಶ್ ಉಪಸ್ಥಿತರಿದ್ದರು. ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು. ವಾರ್ಡ್ ಪ್ರತಿನಿಧಿ ಅಶ್ವಿನಿ ಕೆ.ಎಂ. ಅವರ  ಕ್ಯಾಲೆಂಡರ್  …

ಸ್ತ್ರೀ ಸುರಕ್ಷಾ ಪಿಂಚಣಿ: ಅರ್ಜಿ ಭರ್ತಿಗೊಳಿಸಲು ಬಡವರಿಂದ ಅಧಿಕ ಮೊತ್ತ ವಸೂಲು ಮಾಡುತ್ತಿರುವುದಾಗಿ ಸಿಪಿಎಂ ಆರೋಪ

ಮೀಯಪದವು: ರಾಜ್ಯದ ಎಡರಂಗ ಸರಕಾರ ಘೋಷಿಸಿದ 36ವರ್ಷದಿಂದ 60 ವರ್ಷದವರೆಗಿನ  ಮಹಿಳೆಯರಿಗೆ ಸ್ತ್ರೀ ಸುರಕ್ಷಾ ಯೋಜನೆ ಪ್ರಕಾರ ತಿಂಗಳಿಗೆ 1000 ರೂ. ಲಭಿಸುವುದಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲಾಗುತ್ತಿದೆ. ಈ ಅರ್ಜಿ ಸಲ್ಲಿಕೆಗೆ ಮೀಯಪದವಿನಲ್ಲಿರುವ ಕೆಲವು ಆನ್‌ಲೈನ್ ಸಂಸ್ಥೆಗಳ ಮಾಲಿಕರು 100ರಿಂದ 150 ರೂ.ವರೆಗೆ ವಸೂಲಿ ಮಾಡುತ್ತಿರುವುದಾಗಿ ಸಿಪಿಎಂ ಆರೋಪಿಸಿದೆ. ಈ ಬಗ್ಗೆ ಅರ್ಜಿ ಸಲ್ಲಿಸಲು ತಲುಪಿದ ಮಹಿಳೆಯರು ಸಿಪಿಎಂಗೆ ದೂರಿರುವುದಾಗಿಯೂ ಮುಖಂಡರು ತಿಳಿಸಿದ್ದಾರೆ. ಅರ್ಜಿ ಭರ್ತಿಗೊಳಿಸಿ ನೀಡಲು ಅಧಿಕ ಮೊತ್ತ ವಸೂಲು ಮಾಡುವವರ ವಿರುದ್ಧ ಸಂಬಂಧಪಟ್ಟ …

ಪಂಜ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಭಜನೋತ್ಸವ ಸಮಾಪ್ತಿ

ಮಂಗಲ್ಪಾಡಿ: ಪಂಜ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ೨೭ನೇ ವರ್ಷದ ಶ್ರೀ ಅಯ್ಯಪ್ಪ ಭಜನೋತ್ಸವ ಸಮಾಪ್ತಿಗೊಂಡಿತು.  ಗುರುಸ್ವಾಮಿ ಈಶ್ವರ ಪಂಜ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಈ ವೇಳೆ ಮಂದಿರ ಸಮಿತಿ ಪದಾಧಿಕಾರಿಗಳಾದ ಕೇಶವ ಪಂಜ, ಹೇಮರಾಜ ಶೆಟ್ಟಿ ಪಂಜ, ರಾಮ ಚಂದ್ರ ಬಲ್ಲಾಳ್, ರವೀಂದ್ರ ಪಂಜ ಉಪಸ್ಥಿತರಿದ್ದರು. ಮಧ್ಯಾಹ್ನ ಮಹಾ ಪೂಜೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ  ಭಜನೋತ್ಸವ ಮಂಗಳಾರತಿ,  ಕುಣಿತ ಭಜನೆ,  ಶರಣು ಕರೆಯುವುದು,  ನೃತ್ಯ ವೈವಿದ್ಯ,  ಭಕ್ತಿಭಾವ ಸಂಗೀತ ನಡೆಯಿತು.