ಜಿಲ್ಲೆಯಾದ್ಯಂತ ಪೋಲಿಯೊ ಲಸಿಕೆ ಅಭಿಯಾನ

ಮಂಜೇಶ್ವರ: ಪೋಲಿಯೊ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊAದಿಗೆ ನಿನ್ನೆ ಜಿಲೆ್ಲüಯಾದ್ಯಂತ ಪೋಲಿಯೊ ಲಸಿಕಾ ಅಭಿಯಾನ ನಡೆಯಿತು. ಅಭಿಯಾನದಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೈಜೋಡಿಸಿ ಯಶಸ್ವಿಗೊಳಿಸಿದರು. ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪಂಚಾಯತ್‌ನ ವಿವಿಧ ಭಾಗಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು. ಜಿ.ಎಚ್.ಎಸ್ ಅಂಗನವಾಡಿ, ಉದ್ಯಾವರ ಅಂಗನವಾಡಿ ಮತ್ತು ತಲಪಾಡಿ ಬಸ್ ನಿಲ್ದಾಣದಲ್ಲಿ ನಡೆದ ಲಸಿಕಾ ಕಾರ್ಯಕ್ರಮಗಳಿಗೆ ಪಂಚಾಯತ್ ಸದಸ್ಯರಾದ ಮುಕ್ತಾರ್ ಎ, ಇಲ್ಯಾಸ್ ತೂಮಿನಾಡು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಹಾಜಿ ಕೆ.ಎಂ.ಕೆ, ಫರಾನ, ಝರೀನಾ ನೇತೃತ್ವ ವಹಿಸಿದರು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿದರು.

RELATED NEWS

You cannot copy contents of this page