ಉಪ್ಪಳ: ಅಸೌಖ್ಯ ಬಾಧಿಸಿ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹದ ಹೆಸರಲ್ಲಿ ರಾಜಕೀಯ ಲಾಭ ಗಳಿಸಲು ಮುಸ್ಲಿಂಲೀಗ್ ಹಾಗೂ ಲೀಗ್‌ನ ಜನಪ್ರತಿನಿಧಿಗಳು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬದ ಸದಸ್ಯನ ಅಂತ್ಯ ಸಂಸ್ಕಾರದ ಖರ್ಚು ಭರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದಕ್ಕಿರುವ ಅನುಮತಿಯನ್ನು ಜನಪ್ರತಿನಿಧಿಗಳಿಗೆ ನೀಡಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೃತದೇಹದ ಅಂತ್ಯ ಸಂಸ್ಕಾರದ ಖರ್ಚು ವಹಿಸಿರು ವುದು, ಸಂಸ್ಕಾರ ಕಾರ್ಯಗಳಿಗೆ ನೇತೃತ್ವ ನೀಡಿರುವುದು ಸೇವಾಭಾರತಿಯಾಗಿದೆ ಎಂದೂ ಅಶ್ವಿನಿ ತಿಳಿಸಿದ್ದಾರೆ. ಸತ್ಯ ಸಂಗತಿ ಇದಾಗಿರುವಾಗ ಅಂತ್ಯ ಸಂಸ್ಕಾರದ ಚಿತ್ರಗಳೊಂದಿಗೆ ಅದರ ಎಲ್ಲಾ ಹೊಣೆಗಾರಿಕೆ ನಾವು ವಹಿಸಿಕೊಂಡಿ ರುವುದಾಗಿ ಲೀಗ್ ನೇತಾರರು ಹಾಗೂ ಜನಪ್ರತಿನಿಧಿಗಳು ಹೇಳಿಕೆ ನೀಡುತ್ತಿ ರುವುದು ಸತ್ಯಕ್ಕೆ ದೂರವಾದುದಾಗಿದೆ ಎಂದೂ ಅವರು ತಿಳಿಸಿದ್ದಾರೆ. ಅನಾಥರಾಗಿ ಮೃತಪಟ್ಟ ವ್ಯಕ್ತಿಗಳ ಮೃತದೇಹಗಳನ್ನು ಸಂಸ್ಕರಿಸ ಬೇಕಾಗಿರುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ಅಶ್ವಿನಿ ತಿಳಿಸಿದ್ದಾರೆ. ಸತ್ಯ ಸಂಗತಿಯನ್ನು ಮರೆಮಾಚಿ ಸುಳ್ಳು ಮಾಹಿತಿ ನೀಡಿ ಹಿಂದೂ ಸಮಾಜವನ್ನು ವಿಭಜಿಸಲು ಹಾಗೂ ಬಡಕುಟುಂಬದ ದಯನೀಯ ಸ್ಥಿತಿಯ ಲಾಭ ಗಳಿಸಲು ಮುಸ್ಲಿಂಲೀಗ್, ಜಿಲ್ಲಾ ಪಂಚಾಯತ್, ಪಂಚಾಯತ್ ಪ್ರತಿನಿಧಿಗಳು ಪ್ರಯತ್ನಿಸುತ್ತಿದ್ದಾರೆಂದೂ ಅಶ್ವಿನಿ ತಿಳಿಸಿದ್ದಾರೆ.






