ಕಾಸರಗೋಡು: ರಾಜ್ಯದಲ್ಲಿ ಅದಲಿಬದಲಿಯಾಗಿ ಆಡಳಿತ ನಡೆಸುವ ಸರಕಾರಗಳು ಕಾರ್ಮಿಕರೊಂದಿಗೆ ತೋರಿಸುವ ಅವಗಣನೆ ಬದಲಿಸಬೇಕೆಂದು, ಕ್ಷೇಮನಿಧಿಯಲ್ಲಿ ಸದಸ್ಯರಾದ ಕಾರ್ಮಿಕರಿಗೆ ಸೂಕ್ತ ಸಮಯದಲ್ಲಿಯೇ ಪಿಂಚಣಿ ಹಾಗೂ ಇತರ ಸೌಲಭ್ಯಗಳನ್ನು ನೀಡಲಿರುವ ಕ್ರಮವನ್ನು ರಾಜ್ಯ ಸರಕಾರ ಶೀಘ್ರವೇ ಕೈಗೊಳ್ಳಬೇಕೆಂದು ಬಿಎಂಎಸ್ ಚೆಂಗಳ ಪಂಚಾಯತ್ ಸಮ್ಮೇಳನ ಆಗ್ರಹಿಸಿದೆ. ಎನ್‌ಜಿಒ ಸಂಘ್ ಜಿಲ್ಲಾ ಉಪಾಧ್ಯಕ್ಷ ರಾಜೇಶ್ ನೆಕ್ರಾಜೆ ಉದ್ಘಾಟಿಸಿ ಮಾತನಾಡಿದರು. ಬಿಎಂಎಸ್ ಚೆಂಗಳ ಪಂಚಾಯತ್ ಅಧ್ಯಕ್ಷೆ ಚಿತ್ರಕಲಾ ಮಾವಿನಕಟ್ಟೆ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಕಾಸರಗೋಡು ವಲಯ ಕಾರ್ಯದರ್ಶಿ ಬಾಬು ಮೋನ್ ಚೆಂಗಳ, ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಭರತನ್ ಕೆ.ಕೆಪುರಂ ಶುಭ ಕೋರಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಸಮಾರೋಪ ಭಾಷಣ ನಡೆಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಪ್ರಜೀತ್ ಮಾಳಂಗೈ, ಉಪಾಧ್ಯಕ್ಷರಾಗಿ ಯಶೋಧ ಚೂರಿಪಳ್ಳ, ಚಿತ್ರಕಲಾ ಮಾವಿನಕಟ್ಟೆ, ನಂದೇಶ್ ಪುಂಡೂರು, ಕಾರ್ಯದರ್ಶಿಯಾಗಿ ಅವಿನಾಶ್ ಮಾವಿನಕಟ್ಟೆ, ಜೊತೆ ಕಾರ್ಯದರ್ಶಿಗಳಾಗಿ ರಂಜಿತ್ ಚೆರ್ಕಳ, ಅನಿತ ಚೂರಿಪಳ್ಳ, ಭರತನ್ ಕೆ.ಕೆ.ಪುರಂ ಕೋಶಾಧಿಕಾರಿಯಾಗಿ ಗಿರೀಶ್ ಪುಂಡೂರು ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಕಲಾ ಕ್ರೀಡಾ ಶಿಕ್ಷಣ ವಲಯದಲ್ಲಿ ಸಾಧನೆ ಮಾಡಿದವರನ್ನು ಅಭಿನಂದಿಸಲಾಯಿತು. ಬಿಎಂಎಸ್ ಚೆಂಗಳ ಪಂಚಾಯತ್ ಸಮಿತಿ ಕಾರ್ಯದರ್ಶಿ ರಂಜಿತ್ ಚೆರ್ಕಳ ಸ್ವಾಗತಿಸಿ, ಪ್ರದೀಪ್ ಪುಂಡೂರು ವಂದಿಸಿದರು.






