ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ರಸ್ತೆ ದುಸ್ಥಿತಿಯಲ್ಲಿ: ಪೆರ್ಲ-ಸ್ವರ್ಗ ರಸ್ತೆ ಅಭಿವೃದ್ಧಿಆಗ್ರಹಿಸಿ ಶಾಸಕರಿಗೆ ಮನವಿ

ಪೆರ್ಲ: ಸ್ವರ್ಗ- ಪೆರ್ಲ (ಸೂರಂಬೈಲ್) ರಸ್ತೆ ಅಭಿವೃದ್ಧಿ ಆಗ್ರಹಿಸಿ ಎಣ್ಮಕಜೆ ಮಂಡಲ ೮ನೇ ವಾರ್ಡ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಶಾಸಕ ಎಕೆಎಂ ಅಶ್ರಫ್‌ರಿಗೆ ಮನವಿ ನೀಡಲಾಯಿತು. ಪೆರ್ಲ ಪೇಟೆಯಿಂದ ಪಾಣಾಜೆ ಮೂಲಕ ಪುತ್ತೂರು ಸಂಪರ್ಕಿಸುವ ಪೆರ್ಲ-ಸ್ವರ್ಗ ರಸ್ತೆಯನ್ನು ಅಗಲಗೊಳಿಸಿ ನವೀಕರಿಸುವಂತೆ ಸಮಿತಿ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದೆ. ಕರ್ನಾಟಕದ ಪುತ್ತೂರು ಮಾತ್ರವಲ್ಲದೆ ಬೆಳ್ಳೂರು ಪಂಚಾಯತ್ ವ್ಯಾಪ್ತಿ ಮೂಲಕ ಸುಳ್ಯಪದವು, ಈಶ್ವರಮಂಗಲ, ಮುಳ್ಳೇರಿಯ, ಕುಂಬ್ಡಾಜೆ ಪಂಚಾಯತ್‌ನ ಏತಡ್ಕ ಸಹಿತ ವಿವಿಧ ಭಾಗಗಳಿಗೆ ಸಂಪರ್ಕಿಸುವ ಪ್ರಧಾನ ರಸ್ತೆ ಇದಾಗಿದೆ. ಕಾಸರಗೋಡು, ಕುಂಬಳೆ, …

ಸರಕಾರಿ ನೌಕರರ ಸೌಲಭ್ಯಗಳನ್ನು ಬಜೆಟ್‌ನಲ್ಲಿ ಒಳಪಡಿಸಿ ಮಂಜೂರು ಮಾಡಬೇಕು- ಎನ್‌ಜಿಒ ಅಸೋಸಿಯೇಶನ್

ಕಾಸರಗೋಡು: ಸರಕಾರಿ ನೌಕರರ, ಅಧ್ಯಾಪಕರ ಸೌಲಭ್ಯಗಳನ್ನು ಬಜೆಟ್‌ನಲ್ಲಿ ಒಳಪಡಿಸಿ ಮಂಜೂರು ಮಾಡಬೇಕೆಂದು ಕೇರಳ ಎನ್‌ಜಿಒ ಅಸೋಸಿಯೇಶನ್ ರಾಜ್ಯ ಕಾರ್ಯದರ್ಶಿ ಸುರೇಶ್ ಪೆರಿಯಂಗಾನಂ ಆಗ್ರಹಿಸಿದ್ದಾರೆ. ಪಿಂಚಣಿ ಪ್ರಾಯ ಹೆಚ್ಚಿಸಿ ಸಂಯೋಜಿಸಬೇಕು, ನೌಕರರಿಗೆ ಉಪಯುಕ್ತವಾದ ರೀತಿಯಲ್ಲಿ ವೇತನ ಪರಿಷ್ಕರಣೆ ಜ್ಯಾರಿಗೊಳಿಸಬೇಕು, ಮೆಡಿಸೆಫ್ ದ್ವಿತೀಯ ಹಂತ ನೌಕರರಿಗೆ ಉಪಕಾರಪ್ರದಗೊಳಿಸಬೇಕು, ಸಹಭಾಗಿತ್ವ ಪಿಂಚಣಿ ವಿಭಾಗ ನೌಕರರ ಆತಂಕಗಳನ್ನು ಪರಿಹರಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಸೋಸಿಯೇಶನ್ ಜಿಲ್ಲಾ ಸಮಿತಿ ಸಿವಿಲ್ ಸ್ಟೇಶನ್‌ನಲ್ಲಿ ನಡೆಸಿದ ಹಕ್ಕು ಸಂರಕ್ಷಣಾ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕ್ಷಾಮಭತ್ತೆಯ ಇದುವರೆಗಿನ …

12 ವರ್ಷದ ನರೇಂದ್ರ ಮೋದಿ ಆಡಳಿತ ದೇಶದ ಅಭಿವೃದ್ಧಿ ಸುವರ್ಣ ಕಾಲ- ಕೆ. ಶ್ರೀಕಾಂತ್

ಕಾಸರಗೋಡು: ಮೋದಿ ಸರಕಾರದ 12 ವರ್ಷದ ಆಡಳಿತ ದೇಶದ ಅಭಿವೃದ್ಧಿರಂಗದ ಸುವರ್ಣ ಕಾಲವಾಗಿದೆ ಎಂದು ಬಿಜೆಪಿ ವಲಯಾಧ್ಯಕ್ಷ ಕೆ. ಶ್ರೀಕಾಂತ್ ನುಡಿದರು. ಕೇರಳದ ಸಮಸ್ತ ವಲಯಗಳಲ್ಲೂ ಪ್ರಯೋಜನಪ್ರದ ವಾದ ಅಭಿವೃದ್ಧಿ ಮಾದರಿಗಳನ್ನು ಸೃಷ್ಟಿಸಲು ಮೋದಿ ಸರಕಾರಕ್ಕೆ ಸಾಧ್ಯವಾಗಿದೆ ಎಂದು ಕಾಸರಗೋಡಿ ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಅವರು ನುಡಿದರು. ಯುಪಿಎ ಸರಕಾರದ ಕಾಲದಲ್ಲಿ ರೈಲ್ವೇ ಅಭಿವೃದ್ಧಿಗೆ ಕೇರಳಕ್ಕೆ ಲಭಿಸಿರುವುದು 372 ಕೋಟಿ ರೂ. ಆಗಿತ್ತು. ಇದೇ ವೇಳೆ ಕಳೆದ ಆರ್ಥಿಕ ವರ್ಷದಲ್ಲಿ ಕೇಂದ್ರ ಸರಕಾರ 3,042 ಕೋಟಿ ರೂ. …

ಹನುಮಾನ್ ನಗರ ಸಮುದ್ರ ತೀರದಲ್ಲಿ ರಾಶಿ ಬಿದ್ದ ತ್ಯಾಜ್ಯ: ಪರಿಸರವಿಡೀ ದುರ್ವಾಸನೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಹನುಮಾನ್ ನಗರ ಸಮುದ್ರ ತೀರ ಪ್ರದೇಶದಲ್ಲಿ ರಾಶಿಬಿದ್ದಿರುವ ತ್ಯಾಜ್ಯದಿಂದ ಸ್ಥಳೀಯರಿಗೆ ಸಮಸ್ಯೆ ಉಂಟಾಗಿರುವುದಾಗಿ ದೂರಲಾಗಿದೆ.ಹೆದ್ದಾರಿ ಬದಿಯ ಸರ್ವೀಸ್ ರಸ್ತೆಯ ವಿವಿಧೆಡೆ ತ್ಯಾಜ್ಯ ಉಪೇಕ್ಷಿಸುತ್ತಿರುವುದು ದಿನನಿತ್ಯ ವ್ಯಾಪಕಗೊಂಡಿರುವ ಮಧ್ಯೆ ಸಮುದ್ರ ತೀರದಲ್ಲಿ ಕೂಡಾ ತ್ಯಾಜ್ಯವನ್ನು ಉಪೇಕ್ಷಿಸುವುದು ಆರಂಭಗೊoಡಿದೆ. ಈ ಪರಿಸರದಲ್ಲಿ ಹಸಿರು ಕ್ರಿಯÁ ಸೇನೆ ಕಾರ್ಯಕರ್ತೆಯರಿಗೆ ತ್ಯಾಜ್ಯ ಸಂಗ್ರಹಿಸಿಡಲು ಇರಿಸಲಾದ ಪೆಟ್ಟಿಗೆಯ ಪರಿಸರದಲ್ಲಿಯೇ ತ್ಯಾಜ್ಯ ಉಪೇಕ್ಷಿಸಲಾಗುತ್ತಿದೆ. ವಿವಿಧ ಫ್ಯ್ಲಾಟ್‌ಗಳ ತ್ಯಾಜ್ಯವನ್ನು ತಂದು ಉಪೇಕ್ಷಿಸುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಈಗ ಸಮುದ್ರ ತೀರ ಪ್ರದೇಶ ತ್ಯಾಜ್ಯದಿಂದ ಊರವರಿಗೂ …

ಅಕ್ರಮ ಹಣ ವರ್ಗಾವಣೆ: ಇ.ಡಿ ಮುಂದೆ ಹಾಜರಾದ  ವೀಣಾ ವಿಜಯನ್: ಬಿಗಿ ಭದ್ರತೆ

ಕೊಚ್ಚಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಪುತ್ರಿ ಹಾಗೂ ಎಕ್ಸಾಲೋಜಿಕಲ್ ಎಂಬ ಸಂಸ್ಥೆಯ ಮಾಲಕಿಯಾಗಿರುವ ವೀಣಾ ವಿಜಯನ್ ಈ ಪ್ರಕರಣದ ವಿಚಾರಣೆಗಾಗಿ ಇಂದು ಬೆಳಿಗ್ಗೆ ಕೊಚ್ಚಿಯಲ್ಲಿರುವ ಡೈರೆಕ್ಟರ್ ಆಫ್ ಎನ್‌ಫೋರ್ಸ್‌ಮೆಂಟ್ (ಇ.ಡಿ) ಕಚೇರಿ ಮುಂದೆ ಹಾಜರಾದರು. ಬಳಿಕ ಉನ್ನತ ಇ.ಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆಯ ವಿಷಯದಲ್ಲಿ ಹಲವು ಪ್ರಶ್ನೆಗಳನ್ನು ವೀಣಾರ ಮುಂದಿರಿಸಿ ಆ ಕುರಿತಾಗಿ ಅವರ ಹೇಳಿಕೆಯನ್ನು ದಾಖಲಿಸುವ ಕ್ರಮದಲ್ಲಿ ತೊಡಗಿದರು.   ಪತಿ ಮಾಜಿ ಸಚಿವ ಮೊಹಮ್ಮದ್ ರಿಯಾಸ್‌ರ ಜತೆ …

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಯಕ್ಷಗಾನ ಕಲಾವಿದ ಕೆ.ಸಿ. ಪಾಟಾಳಿ ಪಡುಮಲೆ ನಿಧನ

ಮುಳ್ಳೇರಿಯ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಧ್ಯಾಪಕರಾಗಿದ್ದ ಯಕ್ಷಗಾನ ಕಲಾವಿದ, ಗುರು ಕೆ. ಚಂದ ಪಾಟಾಳಿ ಪಡುಮಲೆ (80) ಇಂದು ಬೆಳಿಗ್ಗೆ ನಿಧನ ಹೊಂದಿದರು.  ಸುಳ್ಯಪದವು ಬಳಿಯ ಪಡುಮಲೆಯಲ್ಲಿ ವಾಸವಾಗಿದ್ದರು. ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ದುಡಿದಿದ್ದರು. ಪಡುಮಲೆ ಚರಿತ್ರೆಯನ್ನು ಸಂಗ್ರಹಿಸಿ ಪ್ರಕಟಿಸಿದ್ದರು. ಹಲವಾರು ಪುಸ್ತಕಗಳನ್ನು ರಚಿಸಿದ ಇವರು ಓರ್ವ ಪ್ರಸಂಗಕರ್ತೃ ಕೂಡಾ ಆಗಿದ್ದರು. ಕೆ.ಸಿ. ಪಾಟಾಳಿ ಎಂದೇ ಪ್ರಸಿದ್ಧರಾಗಿದ್ದ ಇವರು ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಪುತ್ತೂರು ಇದರ ಸ್ಥಾಪಕ ಸದಸ್ಯ ಹಾಗೂ ಗೌರವ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. …

ಆಸ್ಪತ್ರೆಗೆ ಹೋದ ಬಾಲಕಿ ನಾಪತ್ತೆ

ಉಪ್ಪಳ: ಆಸ್ಪತ್ರೆಗೆಂದು ತಿಳಿಸಿ ವಾಸಸ್ಥಳದಿಂದ ಹೋದ ಬಾಲಕಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮಜೀರ್ಪಳ್ಳ ಧರ್ಮನಗರ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಝಾಕಿಯಬಾನು (17) ನಾಪತ್ತೆಯಾದ ಬಾಲಕಿ. ಈಬಗ್ಗೆ ತಂದೆ ಮುಹಮ್ಮದ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ. ನಿನ್ನೆ ಬೆಳಿಗ್ಗೆ 9.30 ಕ್ಕೆ ಮಜೀರ್ಪಳ್ಳದ ಸರಕಾರಿ ಆಸ್ಪತ್ರೆಗೆಂದು ತಿಳಿಸಿ ಬಾಲಕಿ ಕ್ವಾರ್ಟರ್ಸ್‌ನಿಂದ ತೆರಳಿದ್ದು ಅನಂತರ ಮರಳಿ ಬಂದಿಲ್ಲವೆಂದು ತಂದೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಪಟ್ಲದಲ್ಲಿ ಪೊಲೀಸ್ ಕಾರ್ಯಾಚರಣೆ: ಕಾರಿನಲ್ಲಿ ಸಾಗಿಸುತ್ತಿದ್ದ 21,873 ಪ್ಯಾಕೆಟ್ ತಂಬಾಕು ಉತ್ಪನ್ನ ವಶ; ಓರ್ವ ಸೆರೆ

ಕಾಸರಗೋಡು: ಮಧೂರಿಗೆ ಸಮೀಪದ ಪಟ್ಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಪರಿಸರದಲ್ಲಿ ವಿದ್ಯಾನಗರ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳದಲ್ಲಿ ನಿಷೇಧ ಹೇರಲಾಗಿರುವ 21,873 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮಧೂರು ಪಟ್ಲ ಲಕ್ಷಂವೀಡ್ ಕಾಲನಿಯ ಇಬ್ರಾಹಿಂ ಬಾದಿಶಾ ಕೆ. (36) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ. ತಂಬಾಕು ಉತ್ಪನ್ನ ಸಾಗಿಸುತ್ತಿರುವ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ವಿ. ವಿನೀಶ್ ಕುಮಾರ್‌ರಿಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರಂತೆ ವಿದ್ಯಾನಗರ ಪೊಲೀಸ್ ಠಾಣೆಯ  …

ನಾಯಿಮರಿಗಳಿಗೆ ವಿಷಕೊಟ್ಟು ಹತ್ಯೆ

ನೀರ್ಚಾಲು: ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಟ್ಟಡದ ಲ್ಲಿದ್ದ ನಾಲ್ಕು ನಾಯಿ ಮರಿಗಳನ್ನು ವಿಷಕೊಟ್ಟು ಕೊಂದಿರುವುದಾಗಿ ದೂರಲಾಗಿದೆ. ಬೇಳ ಚೌಕಾರ್‌ನಲ್ಲಿ ಖಾಸಗಿ ನರ್ಸಿಂಗ್ ಕಾಲೇಜಿಗಾಗಿ ನಿರ್ಮಿಸುವ ಕಟ್ಟಡದಲ್ಲಿದ್ದ ನಾಯಿ ಮರಿಗಳನ್ನು ವಿಷಕೊಟ್ಟು ಕೊಲ್ಲಲಾಗಿದೆ.  ಕಳೆದ ಆದಿತ್ಯವಾರ ಮುಂಜಾನೆ 2 ಗಂಟೆಯಿಂದ ನಿನ್ನೆ ಬೆಳಿಗ್ಗೆ 8.30ರ ಮಧ್ಯೆಗಿನ ಸಮಯದಲ್ಲಿ ನಾಯಿ ಮರಿಗಳನ್ನು ಯಾರೋ ಕೊಂದಿ ದ್ದಾರೆನ್ನಲಾಗಿದೆ.  ಮಹಿಳೆಯ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಅಶ್ಲೀಲ ದೃಶ್ಯ, ಸಂದೇಶ ಕಳುಹಿಸಿರುವುದಾಗಿ ಆರೋಪಿಸಿ ಎಸ್‌ಎಫ್‌ಐ ಜಿಲ್ಲಾ ಸೆಕ್ರೆಟರಿ ವಿರುದ್ಧ ಯುವತಿ ದೂರು: ಪಕ್ಷ ತನಿಖೆ ಆರಂಭ

ಕಾಸರಗೋಡು: ಎಸ್‌ಎಫ್‌ಐ ಕಾಸರಗೋಡು ಜಿಲ್ಲಾ ಸೆಕ್ರೆಟರಿ ತನ್ನ ಫೋನ್‌ಗೆ ನಿರಂತರ ಅಶ್ಲೀಲ ದೃಶ್ಯ, ಸಂದೇಶಗಳನ್ನು  ಕಳುಹಿಸುತ್ತಿರುವುದಾಗಿ ಆರೋಪಿಸಿ ಯುವತಿ ಸಿಪಿಎಂ ಜಿಲ್ಲಾ ಸೆಕ್ರೆಟರಿಗೆ ದೂರು ನೀಡಿದ್ದಾಳೆ. ಎಸ್‌ಎಫ್‌ಐ  ಏರಿಯಾ ಕಮಿಟಿ ಸದಸ್ಯೆಯಾದ ಯುವತಿ ದೂರು ನೀಡಿದ್ದು ಇದರಂತೆ ಪಕ್ಷ ತನಿಖೆ ಆರಂಭಿಸಿದೆ. ಎಸ್‌ಎಫ್‌ಐ ಜಿಲ್ಲಾ ಸೆಕ್ರೆಟರಿ ಕೆ. ಅನುರಾಗ್ ಯುವತಿಯ ಫೋನ್‌ಗೆ ಹಲವು ಬಾರಿ ಅಶ್ಲೀಲ ದೃಶ್ಯಗಳು ಹಾಗೂ ಸಂದೇಶಗಳನ್ನು ಕಳುಹಿಸಿರುವುದಾಗಿ ದೂರಲಾಗಿದೆ. ಇಂತಹ ದೃಶ್ಯ, ಸಂದೇಶಗಳನ್ನು ತನಗೆ ಕಳುಹಿಸಕೂಡದು ಎಂದು ಆರಂಭ ದಲ್ಲೇ ಆತನಿಗೆ ಯುವತಿ …